ಮಂಡ್ಯ :ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆನ 4ಕ್ಕೆ ಏರಿಕೆ ಕಂಡಿದೆ. ನಿಜಾಮುದ್ದೀನ್ ಧರ್ಮಗುರುಗಳ ಜೊತೆ ಸಂಪರ್ಕ ಹೊಂದಿದ್ದ 35 ವರ್ಷ ವಯಸ್ಸಿನ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಮಂಡ್ಯದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್.. ನಾಲ್ಕಕ್ಕೇರಿದ ಕೊರೊನಾ ಪೀಡಿತರು.. - latest news inmandya
ಈತನಿಗೆ 179ನೇ ನಂಬರ್ ನೀಡಲಾಗಿದೆ. ಈತ 134 ಮತ್ತು 138ನೇ ರೋಗಿಯ ಜೊತೆ ಸಂಪರ್ಕ ಹೊಂದಿದ್ದಾಗಿ ತಿಳಿದು ಬಂದಿದೆ. ಹೀಗಾಗಿ ಈತನನ್ನು ಜಿಲ್ಲಾಡಳಿತದ ವತಿಯಿಂದ ಐಸೊಲೇಷನ್ ವಾರ್ಡ್ನಲ್ಲಿರಿಸಿ ಪರೀಕ್ಷೆ ನಡೆಸಲಾಗುತ್ತಿತ್ತು. ಇಂದು ಈತನ ಪರೀಕ್ಷಾ ವರದಿ ಬಂದಿದ್ದು, ಕೊರೊನಾ ಇರುವುದು ದೃಢಪಟ್ಟಿದೆ.
ಮಂಡ್ಯದಲ್ಲಿ ಮತ್ತೊಂದು ಜೊರೊನಾ ಪಾಸಿಟಿವ್ ಕೇಸ್ ಪತ್ತೆ
ಈತನಿಗೆ 179ನೇ ನಂಬರ್ ನೀಡಲಾಗಿದೆ. ಈತ 134 ಮತ್ತು 138ನೇ ರೋಗಿಯ ಜೊತೆ ಸಂಪರ್ಕ ಹೊಂದಿದ್ದಾಗಿ ತಿಳಿದು ಬಂದಿದೆ. ಹೀಗಾಗಿ ಈತನನ್ನು ಜಿಲ್ಲಾಡಳಿತದ ವತಿಯಿಂದ ಐಸೊಲೇಷನ್ ವಾರ್ಡ್ನಲ್ಲಿರಿಸಿ ಪರೀಕ್ಷೆ ನಡೆಸಲಾಗುತ್ತಿತ್ತು. ಇಂದು ಈತನ ಪರೀಕ್ಷಾ ವರದಿ ಬಂದಿದ್ದು, ಕೊರೊನಾ ಇರುವುದು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು 4 ಮಂದಿಗೆ ಕೊರೊನಾ ಪತ್ತೆಯಾಗಿದೆ. ಎಲ್ಲರೂ ಕೂಡ ಮಳವಳ್ಳಿ ಪಟ್ಟಣದ ನಿವಾಸಿಗಳಾಗಿದ್ದಾರೆ. ಯಾರೂ ಮೂಲತಃ ಮಂಡ್ಯ ಜಿಲ್ಲೆಯವರಲ್ಲ. ಸದ್ಯ ಮಳವಳ್ಳಿಯಲ್ಲಿ ವಾಸವಾಗಿದ್ದಾರೆ ಎಂದು ಹೇಳಲಾಗಿದೆ.