ಮಂಡ್ಯ: ನಿಂತಿದ್ದ ಲಾರಿಗೆ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪ್ರವಾಸಿಗ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡ ಘಟನೆ ಕೆ.ಆರ್ ಪೇಟೆ ತಾಲೂಕಿನ ತೇಗನಹಳ್ಳಿ ಬಳಿ ನಡೆದಿದೆ.
ಲಾರಿಗೆ ಡಿಕ್ಕಿ ಹೊಡೆದ ಮಿನಿ ಬಸ್: ಓರ್ವ ಸಾವು, ಹಲವರಿಗೆ ಗಾಯ - ಲಾರಿಗೆ ಡಿಕ್ಕಿ ಹೊಡೆದ ಮಿನಿ ಬಸ್
ನಿಂತಿದ್ದ ಲಾರಿಗೆ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪ್ರವಾಸಿಗ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡ ಘಟನೆ ಕೆ.ಆರ್ ಪೇಟೆ ತಾಲೂಕಿನ ತೇಗನಹಳ್ಳಿ ಬಳಿ ನಡೆದಿದೆ.
ಕೆ.ಆರ್ ಪೇಟೆ ತಾಲೂಕಿನ ತೇಗನಹಳ್ಳಿ ಬಳಿ ರಸ್ತೆ ಅಪಘಾತ
ನ್ಯಾಯಾಂಗ ಇಲಾಖೆ ನಿವೃತ್ತ ನೌಕರ ಮಲ್ಲಿಕಾರ್ಜುನ ಬಸಪ್ಪ ಹಾಂದಿಯಾಳ್ (63) ಮೃತ ವ್ಯಕ್ತಿ. ಗಾಯಾಳುಗಳು ರಾಣಿಬೆನ್ನೂರು ಮೂಲದವರು ಎಂದು ತಿಳಿದುಬಂದಿದೆ. ಮೈಸೂರು ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ನಿಂತಿದ್ದ ಲಾರಿಗೆ ಹಿಂಬದಿಯಿಂದ ಮಿನಿ ಬಸ್ ಬಂದು ಡಿಕ್ಕಿ ಹೊಡೆದೆ.
ಗಾಯಾಳುಗಳಿಗೆ ಕೆ.ಆರ್ ಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.