ಮಂಡ್ಯ:ಕೆಆರ್ ಪೇಟೆ ಪಟ್ಟಣದ ವೃದ್ಧೆಯೊಬ್ಬರು ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಕೊರೊನಾ ಸೋಂಕಿತರಿಗೆ ಬಿಸ್ಕೆಟ್ ಹಾಗೂ ಜ್ಯೂಸ್ ವಿತರಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಕೊರೊನಾ ಸೋಂಕಿತರಿಗೆ ಬಿಸ್ಕೆಟ್-ಜ್ಯೂಸ್ ವಿತರಿಸಿದ ವೃದ್ಧೆ
ಹಿರಳಹಳ್ಳಿ ಗ್ರಾಮದ ಶಾರದಮ್ಮ ಅವರು ತಮ್ಮ ಉಳಿತಾಯದ 10 ಸಾವಿರ ರೂ. ಹಣದಲ್ಲಿ ಕೋವಿಡ್ ಕೇಂದ್ರದ 200ಕ್ಕೂ ಹೆಚ್ಚು ಸೋಂಕಿತರಿಗೆ ಬಿಸ್ಕೆಟ್ ಹಾಗೂ ಜ್ಯೂಸ್ ಬಾಟಲ್‌ಗಳನ್ನು ವಿತರಿಸಿದರು.
ತಾಲೂಕಿನ ಹಿರಳಹಳ್ಳಿ ಗ್ರಾಮದ ಶಾರದಮ್ಮ (70) ಅವರು ತಮ್ಮ ಉಳಿತಾಯದ 10 ಸಾವಿರ ರೂ. ಹಣದಲ್ಲಿ ಕೋವಿಡ್ ಕೇಂದ್ರದ 200ಕ್ಕೂ ಹೆಚ್ಚು ಸೋಂಕಿತರಿಗೆ ಬಿಸ್ಕೆಟ್ ಹಾಗೂ ಮಾವಿನ ಹಣ್ಣಿನ ಜ್ಯೂಸ್ ಬಾಟಲ್‌ಗಳನ್ನು ವಿತರಿಸಿದರು. ಶಾರದಮ್ಮ ಅವರು ಮೊದಲ ಅಲೆಯ ಸಂದರ್ಭದಲ್ಲಿಯೂ ಕೋವಿಡ್ ಪರಿಹಾರ ನಿಧಿಗೆ 10 ಸಾವಿರ ರೂ. ದೇಣಿಗೆ ನೀಡಿದ್ದರು.
ಕೊರೊನಾ ಸೋಂಕು ಅನೇಕ ಕುಟುಂಬಗಳನ್ನು ಬೀದಿಗೆ ತಳ್ಳಿದೆ. 2ನೇ ಅಲೆಯಲ್ಲಿ ಹೆಚ್ಚು ಸಾವು, ನೋವುಗಳನ್ನು ಉಂಟು ಮಾಡಿದೆ. ಇಲ್ಲಿ ಶಾಶ್ವತ ಏನೂ ಇಲ್ಲ. ಇರುವುದನ್ನು ಸಮಾಜಕ್ಕೆ ನೀಡಿ ಆತ್ಮ ತೃಪ್ತಿ ಪಡೆಯಬೇಕು ಎಂದು ಶಾರದಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡರು. ಈ ವೇಳೆ ತಹಶೀಲ್ದಾರ್ ಎಂ.ಶಿವಮೂರ್ತಿ ಉಪಸ್ಥಿತರಿದ್ದರು.