ಕರ್ನಾಟಕ

karnataka

ETV Bharat / state

ಕಾರ್ಮಿಕರಿಗೆ ಸಿಕ್ಕ ಚಿರತೆ ಮರಿಗಳು: ತಾಯಿ ಚಿರತೆಗಾಗಿ ಬೋನ್​​ ಇಟ್ಟ ಅಧಿಕಾರಿಗಳು! - ಕೆ.ಆರ್.ಪೇಟೆ ತಾಲ್ಲೂಕಿನ ತುಳಸಿ ಗ್ರಾಮ

ಕೆ.ಆರ್.ಪೇಟೆ ತಾಲೂಕಿನ ತುಳಸಿ ಗ್ರಾಮದ ಹೊರ ವಲಯದಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ಕಾರ್ಮಿಕರಿಗೆ ಎರಡು ಚಿರತೆ ಮರಿಗಳು ಸಿಕ್ಕಿವೆ.

officials-who-put-the-bone-for-mother-leopard-in-mandya
ಕಾರ್ಮಿಕರಿಗೆ ಸಿಕ್ಕ ಚಿರತೆ ಮರಿಗಳು

By

Published : Apr 15, 2020, 8:58 PM IST

ಮಂಡ್ಯ: ಕಬ್ಬು ಕಟಾವು ಮಾಡುವ ಕಾರ್ಮಿಕರಿಗೆ ಎರಡು ಚಿರತೆ ಮರಿಗಳು ಸಿಕ್ಕ ಘಟನೆ ಕೆ.ಆರ್.ಪೇಟೆ ತಾಲೂಕಿನ ತುಳಸಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.

ಕಾರ್ಮಿಕರಿಗೆ ಸಿಕ್ಕ ಚಿರತೆ ಮರಿಗಳು

ತುಳಸಿ ಗ್ರಾಮದ ಮಂಜೇಗೌಡ ಎಂಬುವರ ಜಮೀನಿನಲ್ಲಿ ಮರಿಗಳು ಸಿಕ್ಕಿದ್ದು, ತಾಯಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇಟ್ಟಿದ್ದಾರೆ. ಚಿರತೆ ಮರಿಗಳು ಕಬ್ಬು ಕಟಾವು ಮಾಡುವ ಕಾರ್ಮಿಕರಿಗೆ ಸಿಗುತ್ತಿದ್ದಂತೆ ಸ್ಥಳೀಯರು ಆತಂಕಗೊಂಡಿದ್ದರು. ಕೂಡಲೇ ಮರಿಗಳು ಸಿಕ್ಕಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮರಿಗಳನ್ನು ಪರೀಕ್ಷೆಗೆ ಒಳಪಡಿಸಿ ನಂತರ ತಾಯಿ ಚಿರತೆಯನ್ನು ಸೆರೆ ಹಿಡಿಯಲು ಬೋನ್ ಇರಿಸಿದ್ದಾರೆ. ಸ್ಥಳೀಯರು ತಾಯಿ ಚಿರತೆ ಸಿಗುವವರೆಗೂ ಆತಂಕದಲ್ಲಿದ್ದಾರೆ. ಹಾಗಾಗಿ ಕೂಡಲೇ ಚಿರತೆಗಳ ಉಪಟಳ ತಪ್ಪಿಸುವಂತೆ ಮನವಿ ಮಾಡಿದ್ದಾರೆ.

ABOUT THE AUTHOR

...view details