ಕರ್ನಾಟಕ

karnataka

ETV Bharat / state

ಮಳವಳ್ಳಿಯಲ್ಲಿ ಮದ್ಯವರ್ಜನ ಮಾಡಿದವರಿಗೆ ಧರ್ಮಸ್ಥಳದಲ್ಲಿ ಸತ್ವ ಪರೀಕ್ಷೆ - Oaths

ಒಮ್ಮೆ ಮದ್ಯ ಸೇವನೆ ಬಿಟ್ಟವರು ಮತ್ತೆ ಸೇವಿಸುವುದಿಲ್ಲ ಎಂದು ನಂಬುವುದು ಹೇಗೆ? ಹೀಗಾಗಿ ಆಯೋಜಕರು ಒಂದು ಉಪಾಯ ಮಾಡಿದ್ದು, ಎಲ್ಲರೂ ಓಕೆ ಅಂದು ಬಿಟ್ಟರು. ಅದು ಬೇರೆ ಏನೂ ಅಲ್ಲ ಮಂಜುನಾಥನ ದರ್ಶನದ ಮೂಲಕ ಆಣೆ ಮಾಡಿಸಿ ಮಾತು ಪಡೆಯುವುದು.

ಧರ್ಮಸ್ಥಳಕ್ಕೆ ಹೊರಟ ಶಿಬಿರಾರ್ಥಿಗಳು

By

Published : Sep 14, 2019, 6:21 AM IST

ಮಂಡ್ಯ:ಜಿಲ್ಲೆಯ ಮಳವಳ್ಳಿ ತಾಲೂಕಿನ ಮದ್ಯವರ್ಜನ ಕೇಂದ್ರಕ್ಕೆ ಸೇರಿಕೊಂಡು, ಮದ್ಯಸೇವನೆ ಬಿಟ್ಟಿದ್ದೇವೆ ಎನ್ನುವವರನ್ನು ಖಾತ್ರಿಪಡಿಸಲು ಶಿಬಿರದ ಆಯೋಜಕರು ಉಪಾಯವೊಂದನ್ನು ಮಾಡಿದ್ದು, ಮಂಜುನಾಥ ದೇವರ ಮುಂದೆ ಆಣೆ ಪ್ರಮಾಣ ಮಾಡಿಸಲು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ.

ಧರ್ಮಸ್ಥಳಕ್ಕೆ ಹೊರಟ ಶಿಬಿರಾರ್ಥಿಗಳು

ತಾಲೂಕಿನ ಸುಮಾರು 80ಕ್ಕೂ ಹೆಚ್ಚು ಮಂದಿ ಮದ್ಯವ್ಯಸನಿಗಳು ಧರ್ಮಸ್ಥಳ ಮದ್ಯವರ್ಜನ ಕೇಂದ್ರದಲ್ಲಿ ಆಶ್ರಯ ಪಡೆದು, ಮದ್ಯ ಸೇವನೆ ಬಿಟ್ಟಿದ್ದಾರೆ. ಮದ್ಯ ಬಿಟ್ಟವರನ್ನು ನಂಬುವುದು ಹೇಗೆ. ಹೀಗಾಗಿ ಆಯೋಜಕರು ಒಂದು ಉಪಾಯ ಮಾಡಿದ್ದು, ಎಲ್ಲರೂ ಓಕೆ ಅಂದು ಬಿಟ್ಟರು. ಅದು ಬೇರೆ ಏನೂ ಅಲ್ಲ ಮಂಜುನಾಥನ ದರ್ಶನದ ಮೂಲಕ ಆಣೆ ಮಾಡಿಸಿ ಮಾತು ಪಡೆಯುವುದು.

ಕಿರುಗಾವಲು ಮದ್ಯವರ್ಜನ ಕೇಂದ್ರದಿಂದ ಮದ್ಯವರ್ಜನ ಮಾಡಿದವರ ಜೊತೆ ಅವರ ಕುಟುಬಸ್ಥರನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಲಾಯಿತು. ಎಲ್ಲರೂ ಖುಷಿಯಿಂದಲೇ ಧರ್ಮಸ್ಥಳ ಕಡೆ ಹೊರಟಿದ್ದು, ದೇವರ ದರ್ಶನದ ನಂತರ ಮಾತು ಕೊಡಲಿದ್ದಾರೆ ಎಂದು ಹೇಳಲಾಗಿದೆ.

ABOUT THE AUTHOR

...view details