ಮಂಡ್ಯ: ನಾನು ಯಾರನ್ನೂ ಮುಂಬೈನಿಂದ ಮಂಡ್ಯಕ್ಕೆ ಕರೆಸಿಲ್ಲ. ಅಲ್ಲದೇ ನನ್ನ ಸಂಬಂಧಿಯನ್ನೂ ಸಹ ಕರೆಸಲು ಶಿಫಾರಸು ಮಾಡಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಸ್ಪಷ್ಟನೆ ನೀಡಿದರು.
ಇಂದು ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಕೇವಲ ಮಹಾರಾಷ್ಟ್ರದಿಂದ ಜನರು ಬಂದಿಲ್ಲ, 18 ರಾಜ್ಯಗಳಿಂದ ಜಿಲ್ಲೆಗೆ ಜನ ಬಂದಿದ್ದಾರೆ. ಅದರಲ್ಲಿ ಮಹಾರಾಷ್ಟ್ರದಿಂದ ಬಂದವರು ಹೆಚ್ಚಾಗಿದ್ದಾರೆ ಎಂದು ಮಾಹಿತಿ ನೀಡಿದರು. ಮಹಾರಾಷ್ಟ್ರದಿಂದ 1567 ಮಂದಿ, ತಮಿಳುನಾಡಿನಿಂದ 220, ರಾಜಸ್ಥಾನದಿಂದ 25 ಮಂದಿ ಬಂದಿದ್ದು, ಹೀಗೆ ಹಲವು ರಾಜ್ಯಗಳಿಂದ ಜನ ಬಂದಿದ್ದಾರೆ. ಅವರೆಲ್ಲಾ ಕ್ವಾರಂಟೈನ್ ಆಗಿದ್ದಾರೆ ಎಂದು ಮಾಹಿತಿ ನೀಡಿದರು.