ಕರ್ನಾಟಕ

karnataka

ETV Bharat / state

ನನ್ನ ಮತ್ತು ನಿಖಿಲ್​​​​ ನಡುವೆ ಯಾವುದೇ ಜಗಳವಾಗಿಲ್ಲ: ಶಾಸಕ ಅನ್ನದಾನಿ - undefined

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಯನ್ನು ನಂಬಬೇಡಿ. ನಿಖಿಲ್ ಹಾಗೂ ನನ್ನ ನಡುವೆ ಜಗಳವಾಗಿದೆ ಅನ್ನೋದು ಸುಳ್ಳು. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವುದಾಗಿ ಶಾಸಕ ಡಾ. ಅನ್ನದಾನ ತಮ್ಮ ಫೇಸ್​ಬುಕ್​​ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ನನ್ನ ಮತ್ತು ನಿಖಿಲ್​​ ನಡುವೆ ಯಾವುದೇ ಜಗಳವಾಗಿಲ್ಲಾ

By

Published : Apr 27, 2019, 11:39 PM IST

ಮಂಡ್ಯ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಯನ್ನು ನಂಬಬೇಡಿ. ನಿಖಿಲ್ ಹಾಗೂ ನನ್ನ ನಡುವೆ ಜಗಳವಾಗಿದೆ ಅನ್ನೋದು ಸುಳ್ಳು. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವುದಾಗಿ ಶಾಸಕ ಡಾ. ಅನ್ನದಾನ ತಮ್ಮ ಫೇಸ್​ಬುಕ್​​ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಶಾಸಕ ಅನ್ನದಾನಿ

ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಅನ್ನದಾನಿ ತಮ್ಮ ಅಧಿಕೃತ ಫೇಸ್​ಬುಕ್​ ಅಕೌಂಟ್​​ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ, ಶೇರ್ ಮಾಡುವ ಮೂಲಕ ವಿರೋಧಿಗಳಿಗೆ ತಲುಪಿಸಿ ಎಂದು ಬರೆದುಕೊಂಡಿದ್ದಾರೆ. ತಮ್ಮ ವಿಡಿಯೋದಲ್ಲಿ ನಾನು ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿರುವೆ. ನಿಖಿಲ್ ಅವರಿಗಿಂತಲೂ ವಯಸ್ಸಿನಲ್ಲಿ ದೊಡ್ಡವನು ಇದ್ದೇನೆ. ದೇವೇಗೌಡರ ಕುಟುಂಬದಲ್ಲಿ ನನ್ನನ್ನು ಒಬ್ಬ ಸದಸ್ಯ ಎಂದು ಭಾವಿಸಿದ್ದಾರೆ.

ದೇವರಾಜು ಅರಸು ನಿಗಮ ಮಂಡಳಿಯಲ್ಲಿ ಕ್ಯಾಬಿನೆಟ್ ದರ್ಜೆಯ ಅಧ್ಯಕ್ಷನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಕುಮಾರಸ್ವಾಮಿ ಅವರಾಗಲಿ ಅಥವಾ ನಿಖಿಲ್ ಕುಮಾರಸ್ವಾಮಿಯವರಾಗಲಿ ಈ ತರಹದ ಒಂದು ಸಂದರ್ಭ ಸಮೀಪಿಸಲು ಸಾಧ್ಯವಿಲ್ಲ. ಈ ರೀತಿಯಾದ ಸುಳ್ಳು ಸಂದೇಶವನ್ನು ಫೇಸ್​ಬುಕ್ ಹಾಗೂ ವಾಟ್ಸಪ್​ಗಳಲ್ಲಿ ಯಾರು ಹರಿಬಿಟ್ಟಿದ್ದಾರೋ ಈ ಕೂಡಲೇ ನಿಲ್ಲಿಸಬೇಕು. ನಿಖಿಲ್ ಕುಮಾರಸ್ವಾಮಿ ಅವರು ಬಹಳ ಆತ್ಮೀಯರು. ಕಿರಿಯ ಸೋದರನಂತೆ ನೋಡಿಕೊಂಡಿದ್ದಾರೆ ಕುಮಾರಣ್ಣ ಅವರು. ಈ ರೀತಿ ಸುಳ್ಳು ಸುದ್ದಿಯನ್ನು ಹಬ್ಬಿಸುವುದನ್ನು ಬಿಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಈ ರೀತಿಯಾದ ತಪ್ಪು ಸಂದೇಶಗಳನ್ನು ನೀಡುತ್ತಿರುವವರ ವಿರುದ್ಧ ಸೈಬರ್ ಕ್ರೈಂನಲ್ಲಿ ದೂರು ದಾಖಲು ಮಾಡುವುದಾಗಿ ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details