ಮಂಡ್ಯ:ಕೊರೊನಾ ಭಯ ಭಕ್ತರನ್ನೂ ಬಿಟ್ಟಿಲ್ಲ. ಕೊರೊನಾ ಲಾಕ್ಡೌನ್ ಮುಗಿದ ಬಳಿಕ ಇಂದಿನಿಂದ ದೇವಾಲಯಗಳು ಬಾಗಿಲು ತೆರೆದಿವೆ. ಆದರೆ, ಭಕ್ತರು ಬಾರದೇ ದೇಗುಲಗಳು ಭಣಗುಡುತ್ತಿವೆ.
ಮಂಡ್ಯ: ಭಕ್ತರಿಲ್ಲದೇ ದೇವಾಲಯಗಳು ಖಾಲಿ ಖಾಲಿ - ಸಾಮಾಜಿಕ ಅಂತರಕ್ಕೆ ಮನ್ನಣೆ
ಜಿಲ್ಲೆಯ ಹಲವು ದೇವಾಲಯಗಳು ಭಕ್ತರಿಲ್ಲದೇ ಖಾಲಿ ಖಾಲಿ ಆಗಿವೆ. ದೇವಸ್ಥಾನದ ಆಡಳಿತ ಮಂಡಳಿಗಳು ಸಾಮಾಜಿಕ ಅಂತರಕ್ಕೆ ಮನ್ನಣೆ ನೀಡಿವೆ. ಸ್ಯಾನಿಟೈಸರ್ ದಾಸ್ತಾನು ಮಾಡಿಕೊಂಡಿದ್ದರೂ ಭಕ್ತರು ದೇವಸ್ಥಾನದ ಬಳಿ ಸುಳಿಯುತ್ತಿಲ್ಲ.
ಜಿಲ್ಲೆಯ ಹಲವು ದೇವಾಲಯಗಳು ಭಕ್ತರಿಲ್ಲದೇ ಖಾಲಿ ಖಾಲಿ ಆಗಿವೆ. ಮೇಲುಕೋಟೆಯ ಚಲುವ ನಾರಾಯಣಸ್ವಾಮಿ, ಶ್ರೀರಂಗಪಟ್ಟಣದ ನಿಮಿಷಾಂಭ ಹಾಗೂ ಶ್ರೀ ರಂಗನಾಥ ಸ್ವಾಮಿ, ಮುತ್ತತ್ತಿಯ ಹನುಮಂತರಾಯ ಸೇರಿದಂತೆ ಹಲವು ದೇವಸ್ಥಾನಗಳು ಇಂದಿನಿಂದ ಬಾಗಿಲು ತೆರೆದಿವೆ. ಆದರೆ ಭಕ್ತರು ಬರುತ್ತಿಲ್ಲ.
ದೇವಸ್ಥಾನದ ಆಡಳಿತ ಮಂಡಳಿಗಳು ಸಾಮಾಜಿಕ ಅಂತರಕ್ಕೆ ಮನ್ನಣೆ ನೀಡಿವೆ. ಸ್ಯಾನಿಟೈಸರ್ ದಾಸ್ತಾನು ಮಾಡಿಕೊಂಡಿದ್ದರೂ ಭಕ್ತರು ದೇವಸ್ಥಾನದ ಬಳಿ ಸುಳಿಯುತ್ತಿಲ್ಲ. ಬೆರಳೆಣಿಕೆಯಷ್ಟು ಮಂದಿ ಮಾತ್ರ ದೇವರ ದರ್ಶನಕ್ಕೆ ಆಗಮಿಸುತ್ತಿದ್ದು, ಪುರೋಹಿತರು ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.