ಮಂಡ್ಯ:ಜಿಲ್ಲೆಯಲ್ಲಿ ಯಾರಿಗೂ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಕೇಂದ್ರದ ನಿಯಮಾವಳಿಯಂತೆ ವಿದೇಶದಿಂದ ಇಬ್ಬರು ಬಂದ ಹಿನ್ನಲೆಯಲ್ಲಿ ಇಬ್ಬರನ್ನೂ ಐಸೋಲೇಷನ್ ವಾರ್ಡ್ ನಲ್ಲಿ ನಿಗಾಕ್ಕೆ ಇಡಲಾಗಿದೆ. ಇದರಲ್ಲಿ ಓರ್ವ ಟೆಕ್ಕಿ ಇದ್ದು, ಆತನ ಮನವಿ ಮೇರೆಗೆ ಚಿಕಿತ್ಸೆ ನೀಡಿ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು.
ನಾಗಮಂಗಲ ಪಟ್ಟಣದ ಮಹಿಳೆ ಫೆ.15 ರಂದು ಜಿದ್ದಾಗೆ ತೆರಳಿದ್ದರು. ನಂತರ ಬೆಂಗಳೂರಿಗೆ ವಾಪಸ್ ಆಗಿದ್ದರು. ಆ ಮಹಿಳೆಗೆ ಕಲಬುರಗಿಯ ಮೃತ ವೃದ್ಧ ಮಹಮ್ಮದ್ ಸಿದ್ದಕಿ ಜೊತೆ ಯಾವುದೇ ಸಂಪರ್ಕ ಇರಲಿಲ್ಲ. ಅವರ ಜೊತೆ ಪ್ರಯಾಣ ಕೂಡ ಮಾಡಿಲ್ಲ, ಮಹಿಳೆ ಆರೋಗ್ಯವಾಗಿದ್ದಾರೆ. ಕೇಂದ್ರದ ನಿಯಾಮವಳಿ ಪ್ರಕಾರ ನಿಗಾ ಇಡಲಾಗಿದೆ. ಇಂದು ಸಂಜೆ ವರದಿ ಬರಲಿದ್ದು, ಮಹಿಳೆ ಜೊತೆ 7 ಜನ ಸೌದಿಯಿಂದ ಬಂದಿದ್ದಾರೆ. ಯಾರಿಗೂ ಆರೋಗ್ಯ ಸಮಸ್ಯೆ ಇಲ್ಲ. ಹದಿನಾಲ್ಕು ದಿನ ನಿಗಾ ವಹಿಸಲಾಗಿತ್ತು ಎಂದಿದ್ದಾರೆ.