ಮಂಡ್ಯ: ಇಂದು ನಿಖಿಲ್ ಕುಮಾರಸ್ವಾಮಿ ಮಂಡ್ಯದ ಕಾಳಿಕಾಂಬ ದೇವಾಲಯದಿಂದ ಜೆಡಿಎಸ್-ಕಾಂಗ್ರೆಸ್ ಮೆರವಣಿಗೆಯ ಮೂಲಕ ತೆರಳಿ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಿಖಿಲ್
ನಿಖಿಲ್ ಕುಮಾರಸ್ವಾಮಿ ಮಂಡ್ಯದ ಕಾಳಿಕಾಂಬ ದೇವಾಲಯದಿಂದ ಮೆರವಣಿಗೆಯ ಮೂಲಕ ತೆರಳಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ನಿಖಿಲ್ ನಾಮಪತ್ರ ಸಲ್ಲಿಕೆ
ಎತ್ತಿನಗಾಡಿಯಲ್ಲಿ ಮೆರವಣಿಗೆ ಆರಂಭಿಸಿದ ನಿಖಿಲ್ಗೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಸಚಿವ ಪುಟ್ಟರಾಜು ಸೇರಿ ಹಲವರು ಸಾಥ್ ನೀಡಿದರು. ಮಲ್ಲನಾಯಕನಕಟ್ಟೆಯ ಪ್ರಮೋದ್ ಹಾಗೂ ಬೀರಗೌಡನಹಳ್ಳಿಯ ಶಂಕರಲಿಂಗೇಗೌಡ ಅವರನ್ನು ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆಸಲಾಯಿತು.
ಹೆಚ್.ಡಿ ರೇವಣ್ಣ ಅವರು ನಿಖಿಲ್ಗೆ ದೇವರ ಫೋಟೋ, ನಿಂಬೆಹಣ್ಣು, ಹೂವು, ಕುಂಕುಮ, ಅಕ್ಷತೆ, ಕಲ್ಲು ಸಕ್ಕರೆಯನ್ನು ಪ್ರಸಾದವಾಗಿ ನೀಡಿ, ಶಾಲು ಹೊದಿಸಿ ಆಶೀರ್ವದಿಸಿದರು.