ಕರ್ನಾಟಕ

karnataka

ETV Bharat / state

ರೈಡರ್ ಸಿನಿಮಾ ಪೈರಸಿ: ಭಾವುಕರಾದ ನಿಖಿಲ್ ಕುಮಾರಸ್ವಾಮಿ - ರೈಡರ್ ಸಿನಿಮಾ ಪೈರಸಿ

ಡಿಸೆಂಬರ್ 24ಕ್ಕೆ ರಿಲೀಸ್ ಆಗಿದ್ದ ರೈಡರ್ ಸಿನಿಮಾ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುತ್ತಿತ್ತು. ಸಿನಿಮಾ ರಿಲೀಸ್ ಆದ ಎರಡನೇ ದಿನಕ್ಕೆ ಕಿಡಿಗೇಡಿಗಳಿಂದ ಸಿನಿಮಾ ಪೈರಸಿಯಾಗಿದೆ. ಇದರ ವಿರುದ್ಧ ನಟ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Nikhil kumaraswamy rider movie piracy
ನಿಖಿಲ್​ ಕುಮಾರಸ್ವಾಮಿ ರೈಡರ್​ ಸಿನಿಮಾ ಪೈರಸಿ

By

Published : Dec 26, 2021, 3:41 PM IST

Updated : Dec 26, 2021, 4:26 PM IST

ಮಂಡ್ಯ:ನನ್ನ ಸಿನಿಮಾ ಪೈರಸಿಯಾಗಿದೆ. ನಾವು ಕಷ್ಟಪಟ್ಟು ಎರಡು ವರ್ಷಗಳ ಕಾಲ ಸಿನಿಮಾ ಮಾಡಿದ್ದೇವೆ. ಆದರೆ ಕೆಲವರು ಸಿನಿಮಾವನ್ನು ಪೈರಸಿ ಮಾಡಿ ಹಾಳು ಮಾಡುತ್ತಿದ್ದಾರೆ ಎಂದು ನಟ ನಿಖಿಲ್​ ಕುಮಾರಸ್ವಾಮಿ ಭಾವುಕರಾದರು.

ನಿಖಿಲ್​ ಕುಮಾರಸ್ವಾಮಿ ರೈಡರ್​ ಸಿನಿಮಾ ಪೈರಸಿ

ಇಂದು ನಗರಕ್ಕೆ ರೈಡರ್​ ನಿಸಿಮಾ ಪ್ರಮೋಷನ್​​​ಗಾಗಿ ನಿಖಿಲ್ ಆಗಮಿಸಿದ್ದರು. ಈ ವೇಳೆ ರೈಡರ್​ ಸಿನಿಮಾ ಪೈರಸಿಯಾದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ಆಕ್ರೋಶ ಹೊರಹಾಕಿದರು.

ಕೆಲವರು ನನ್ನ ಸಿನಿಮಾ ಮುಗಿಸಲು ಪೈರಸಿ ಮಾಡಿದ್ದಾರೆ. ಈ ರೀತಿ ಮಾಡುವುದರಿಂದ ನಿರ್ಮಾಪಕರು ಸಂಕಷ್ಟಕ್ಕೆ ಈಡಾಗುತ್ತಾರೆ. ತಮಿಳು ಹ್ಯಾಕರ್ ಎಂಬ ವೆಬ್​​ಸೈಟ್​ನಿಂದ​​ ಸಿನಿಮಾ ಪೈರಸಿಯಾಗಿದೆ. ಈ ಹೀನ ಕೃತ್ಯ ಮಾಡಿದವರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ಕನ್ನಡ ಚಿತ್ರರಂಗವನ್ನು ಹಾಳು ಮಾಡಲು ಕೆಲವರು ಪೈರಸಿ ಮಾಡಿದ್ದಾರೆ. ನನಗೆ ಸಾಕಷ್ಟು ಕನ್ನಡ ಸಿನಿಮಾಗಳನ್ನು ಮಾಡಬೇಕೆಂಬ ಆಸೆಯಿದೆ. 25 ವರ್ಷಗಳ ನಂತರ ನಾನು ಹಿಂತಿರುಗಿ ನೋಡಿದಾಗ ನನ್ನ ಲೈಬ್ರರಿಯಲ್ಲಿ ಒಳ್ಳೆ ಸಿನಿಮಾಗಳನ್ನು ಮಾಡಿದ್ದೇನೆ ಎಂಬ ಭಾವನೆ ಮೂಡಬೇಕು. ಹಾಗಾಗಿ ಸಿನಿಮಾ ರಂಗದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತೇನೆ. ಸಮಯ ಬಂದಾಗ ನಾನು ರಾಜಕೀಯ ಮಾಡುತ್ತೇನೆ. ನನ್ನನ್ನು ನಂಬಿದ ಕಾರ್ಯಕರ್ತರಿಗೋಸ್ಕರ ರಾಜಕಾರಣ ಮಾಡುತ್ತೇನೆ ಎಂದು ಇದೇ ವೇಳೆ ನಿಖಿಲ್​ ಕುಮಾರಸ್ವಾಮಿ ಹೇಳಿದ್ರು.

Last Updated : Dec 26, 2021, 4:26 PM IST

ABOUT THE AUTHOR

...view details