ಕರ್ನಾಟಕ

karnataka

ETV Bharat / state

ಸಂಸದರು ಬೇರೆಯವರನ್ನು ದೂರುವ ಬದಲು ಆತ್ಮಾವಲೋಕನ ಮಾಡಿಕೊಳ್ಳಲಿ: ನಿಖಿಲ್​ ಕುಮಾರಸ್ವಾಮಿ

ಸಂಸದರಾಗಿ ಜಿಲ್ಲೆಗೆ ಅವರ ಕೊಡುಗೆ ಏನು ಎಂದು ಅವರು ಮೊದಲು ಪ್ರಶ್ನೆ ಮಾಡಿಕೊಳ್ಳಲಿ. ಮಂಡ್ಯದ ಶಾಸಕರು ಎರಡ್ಮೂರು ಬಾರಿ ಆಯ್ಕೆ ಆಗಿದ್ದಾರೆ. ಅಭಿವೃದ್ಧಿ ಆಗಿಲ್ಲ ಅಂದ್ರೆ, ಶಾಸಕರನ್ನು ಜನರು ಪ್ರಶ್ನೆ ಮಾಡ್ತಾರೆ. ಇವರನ್ನ ಪ್ರಶ್ನೆ ಮಾಡೋರು ಯಾರು?. ಪ್ರತಿ ಬಾರಿ ಅವರು ಹಾಗೆ ಅಂದ್ರು ಇವರು ಹೀಗೆ ಅಂದ್ರು ಎಂದು ಅನುಕಂಪ ಗಿಟ್ಟಿಸಿಕೊಳ್ಳಲು ಆಗಲ್ಲ ಎಂದು ಹೇಳುವ ಮೂಲಕ ನಿಖಿಲ್​ ಕುಮಾರ್​ಸ್ವಾಮಿ ಸಂಸದೆ ಸುಮಲತಾ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

By

Published : Mar 28, 2022, 3:42 PM IST

Nikhil Kumaraswamy
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ

ಮಂಡ್ಯ: ಯಾರೋ ಏನೋ ಅಂದ್ಬಿಟ್ರು ಅಂತಾ ಅನುಕಂಪ ಗಿಟ್ಟಿಸಿಕೊಳ್ಳಲು ಹೋದ್ರೆ, ಅದು ಯಾವಾಗಲೂ ನಡೆಯಲ್ಲ. ಬೇರೆಯವರನ್ನು ದೂರುವ ಬದಲು ಸಂಸದರು ಆತ್ಮವಲೋಕನ ಮಾಡಿಕೊಳ್ಳಲಿ. ಸಂಸದರಾಗಿ ಜಿಲ್ಲೆಗೆ ಅವರ ಕೊಡುಗೆ ಏನು ಎಂದು ಅವರು ಮೊದಲು ಪ್ರಶ್ನೆ ಮಾಡಿಕೊಳ್ಳಲಿ ಎಂದು ಸಂಸದೆ ಸುಮಲತಾ ಅಂಬರೀಶ್​ ಅವರಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ

ಜಿಲ್ಲೆಯ ಮದ್ದೂರಿನಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದ, ಮಂಡ್ಯದ ಶಾಸಕರು ಎರಡ್ಮೂರು ಬಾರಿ ಆಯ್ಕೆ ಆಗಿದ್ದಾರೆ. ಅಭಿವೃದ್ಧಿ ಆಗಿಲ್ಲ ಅಂದ್ರೆ, ಶಾಸಕರನ್ನು ಜನರು ಪ್ರಶ್ನೆ ಮಾಡ್ತಾರೆ. ಆದ್ರೆ ಸಂಸದರನ್ನು ಪ್ರಶ್ನೆ ಮಾಡೋರು ಯಾರು? ಎಂದು ಪ್ರಶ್ನಿಸಿದರು. ಪ್ರತಿ ಬಾರಿ ಕಾಲು ಕೆರೆದುಕೊಂಡು ಜಗಳ ಹುಟ್ಟುಹಾಕಿ, ಯಾರೋ ಏನೋ ಅಂದ್ಬಿಟ್ರು ಅಂತಾ ಅನುಕಂಪ ಗಿಟ್ಟಿಸಿಕೊಳ್ಳಲು ಆಗಲ್ಲ. 2024ರ ವರೆಗೂ ಅವರ ಅಧಿಕಾರ ಇದೆ. ಜನಗಳ ಜತೆ ನಿಂತು ಕೆಲಸ ಮಾಡಲಿ ಎಂದು ನಿಖಿಲ್​ ಕುಮಾರಸ್ವಾಮಿ ಒತ್ತಾಯಿಸಿದರು.

ಇದನ್ನೂ ಓದಿ:ಈಶ್ವರಪ್ಪ ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ : ಬಿ.ಕೆ ಹರಿಪ್ರಸಾದ್

For All Latest Updates

ABOUT THE AUTHOR

...view details