ಕರ್ನಾಟಕ

karnataka

ETV Bharat / state

ಏಟಿಗೆ ಎದಿರೇಟು... ಅಭಿಷೇಕ್​​​​ ಟೀಕೆಗೆ ನಿಖಿಲ್​​ ತಿರುಗೇಟು - news kannada

ಕುಮಾರಸ್ವಾಮಿ ಟವಲ್ ಹಾಕಿಕೊಂಡು ಅಳುತ್ತಾರೆ ಎಂದಿದ್ದ ಅಭಿಷೇಕ್ ಟೀಕೆಗೆ ಭಾವುಕರಾದ ನಿಖಿಲ್‌ ಕುಮಾರಸ್ವಾಮಿ, ಪ್ರಚಾರದ ವೇಳೆ ಏನು ಉತ್ತರ ನೀಡಿದ್ದಾರೆ ಗೊತ್ತಾ?

ಅಭಿಷೇಕ್ ಟೀಕೆಗೆ ನಿಖಿಲ್‌ ಕುಮಾರಸ್ವಾಮಿಯ ಉತ್ತರ

By

Published : Mar 30, 2019, 8:00 PM IST

ಮಂಡ್ಯ:ಮೈಕ್ ಮುಂದೆ ಟವಲ್ ಹಿಡಿದುಕೊಂಡು ಅಳಬೇಕೆ? ನಾವು ಹಂಗೆಲ್ಲ ಅಳಲ್ಲ. ನೀವು ಇರುವಾಗ ನಾವ್ಯಾಕೆ ಅಳಬೇಕು ಎಂದು ಮುಖ್ಯಮಂತ್ರಿ ಕುಮಾಸ್ವಾಮಿಗೆ ವ್ಯಂಗ್ಯದ ಮಾತುಗಳನ್ನಾಡಿದ್ದ ಅಭಿಷೇಕ್ ಅಂಬರೀಶ್​ ಹೇಳಿಕೆಗೆ ಜೆಡಿಎಸ್​ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ನಾಟಕ ಮಾಡಿಕೊಂಡು 60 ವರ್ಷದಿಂದ ರಾಜಕಾರಣ ಮಾಡಿಕೊಂಡು ಬಂದಿಲ್ಲ. ಹಾಗೆನಾದರೂ ರಾಜಕಾರಣ ಮಾಡಿಕೊಂಡು ಬಂದಿದ್ರೆ ಮಂಡ್ಯದಲ್ಲಿ ಏಳಕ್ಕೆ ಏಳು ಸೀಟನ್ನು ಗೆಲ್ಲುತ್ತಿರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಅಭಿಷೇಕ್ ಟೀಕೆಗೆ ನಿಖಿಲ್‌ ಕುಮಾರಸ್ವಾಮಿಯ ಉತ್ತರ

ನನ್ನ ವಿರೋಧಿಗಳ ಬಗ್ಗೆ ಒಂದು ಶಬ್ಧ ಸಹ ಮಾತನಾಡಬಾರ್ದು ಅಂತಾ ಅಂದುಕೊಂಡಿದ್ದೆ. ಜನ ಕುಮಾರಸ್ವಾಮಿ ಹಾಗೂ ದೇವೇಗೌಡರ ಮೇಲೆ ಟೀಕೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಟೀಕೆ ಮಾಡುವವರಿಗೆ ಅವರ ತಂದೆ-ತಾಯಿ ಸರಿಯಾದ ಸಂಸ್ಕೃತಿಯಿಂದ ಬೆಳೆಸಿಲ್ಲ ಎಂದು ಎದಿರೇಟು ನೀಡಿದರು.

ಅಂಬರೀಶ್ ಹೆಸರು ದುರುಪಯೋಗ ಮಾಡಿಕೊಂಡು ನಾನು ಮತ ಪಡೆಯುವ ಪರಿಸ್ಥಿತಿಯಲ್ಲಿಲ್ಲ. ಇದನ್ನು ನಾನು ನನ್ನ ಪಕ್ಷೇತರ ಅಭ್ಯರ್ಥಿಗೆ ಹೇಳುತ್ತೇನೆ ಎಂದು ಸುಮಲತಾ ಅಂಬರೀಶ್​​ ವಿರುದ್ಧವೂ ವಾಗ್ದಾಳಿ ನಡೆಸಿದರು.

ABOUT THE AUTHOR

...view details