ಮಂಡ್ಯ: ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಂಡ್ಯದ ಮೇಲುಕೋಟೆ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ರೈತರ ಮನವಿ ಮೇರೆಗೆ ಎತ್ತಿನ ಗಾಡಿ ಏರಿ ಪ್ರಚಾರ ಮಾಡಿದ್ದಾರೆ.
ಎತ್ತಿನಗಾಡಿ ಏರಿ ಮೇಲುಕೋಟೆ ಕ್ಷೇತ್ರದಲ್ಲಿ ಪ್ರಚಾರಕ್ಕಿಳಿದ ಮೈತ್ರಿ ಅಭ್ಯರ್ಥಿ ನಿಖಿಲ್ ಭರ್ಜರಿ - ವಿಧಾನಸಭಾ ಕ್ಷೇತ್ರ
ಮಂಡ್ಯದ ಮೇಲುಕೋಟೆ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ರೈತರ ಮನವಿ ಮೇರೆಗೆ ಎತ್ತಿನ ಗಾಡಿ ಏರಿದ ನಿಖಿಲ್, ಬೀದಿಗಳಲ್ಲಿ ಮೆರವಣಿಗೆ ಮೂಲಕ ಮತ ಬೇಟೆಗಿಳಿದಿದ್ದಾರೆ.
ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ
ಮಂಡ್ಯ ತಾಲೂಕಿನ ಹೊಳಲು ಗ್ರಾಮದಲ್ಲಿ ಎತ್ತಿನಗಾಡಿ ಏರಿ ಸಂಚಾರ ಮಾಡಿದ ನಿಖಿಲ್‌ಗೆ ಭರ್ಜರಿ ಸ್ವಾಗತವೇ ಸಿಕ್ಕಿದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮತ ಬೇಟೆ ಮಾಡುತ್ತಿದ್ದಾರೆ. ನಿಖಿಲ್‌ಗೆ ಸಚಿವ ಪುಟ್ಟರಾಜು ಸಾಥ್ ನೀಡಿದ್ದು, ಹೋದ ಕಡೆಯೆಲ್ಲಾ ಹೂವಿನ ಮಳೆ ಸುರಿಸುತ್ತಿದ್ದಾರೆ ಕಾರ್ಯಕರ್ತರು. ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದು, 30ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಂಚಾರ ಮಾಡಲಿದ್ದಾರೆ.