ಮಂಡ್ಯ:ನೂತನ ಎಸ್‌ಪಿ ಪರಶುರಾಮ್, ಮದ್ದೂರು ತಾಲೂಕಿನ ತೊಪ್ಪನಹಳ್ಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದರು.
ವರ್ಷದಲ್ಲಿ 3 ಮುಖಂಡರ ಕೊಲೆ, ಸತತ ಘರ್ಷಣೆ... ಮತ್ತೆ ಮರಳಿ ಬಂದಾಗಲೂ ಗಲಾಟೆ....? - ಎರಡು ಗುಂಪುಗಳ ನಡುವೆ ಘರ್ಷಣೆ
ಈ ಹಿಂದೆ ತೊಪ್ಪನಹಳ್ಳಿಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ಕಾರಣ ಗ್ರಾಮಸ್ಥರೆಲ್ಲರೂ ಊರು ಬಿಡುವಂತಾಗಿತ್ತು. ಮರಳಿ ಊರು ಸೇರಿದಾಗಲೂ ಮತ್ತೆ ಗಲಾಟೆ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಸ್‌ಪಿ ಪರಶುರಾಮ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ವರ್ಷದಲ್ಲಿ ಮೂವರು ಮುಖಂಡರ ಕೊಲೆ ನಡೆದಿತ್ತು. ಹೀಗಾಗಿ ಗ್ರಾಮದ ಪರಿಸ್ಥಿತಿ ಅವಲೋಕಿಸಲು ಎಸ್‌ಪಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಘರ್ಷಣೆ ಸಂಬಂಧ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆಯ ಸಮೇತ ಬಹುತೇಕರು ಊರು ತೊರೆದಿದ್ದರು. ಆದರೆ ಬುಧವಾರ ಗ್ರಾಮಕ್ಕೆ ಆಗಮಿಸಿದಾಗ ಮತ್ತೆ ಎರಡು ಗುಂಪುಗಳ ನಡುವೆ ಮತ್ತೆ ಮಾತಿನ ಚಕಮಕಿ ನಡೆದಿತ್ತು. ಈ ಹಿನ್ನಲೆಯಲ್ಲಿ ಎಸ್‌ಪಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಗ್ರಾಮದ ಕೆಲ ಮುಖಂಡರ ಬಳಿ ಮಾಹಿತಿ ಪಡೆದು, ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತನ್ನಿ. ಕಾನೂನು ವಿರುದ್ಧವಾಗಿ ನಡೆದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.