ಮಂಡ್ಯ :ರಾಜ್ಯ ಸರ್ಕಾರ ನೂತನ ಸಂಸದೆಗೆ ಹೊಸ ಜವಾಬ್ದಾರಿವಹಿಸಿದೆ. ಜಿಲ್ಲೆಯ ರೈತರ ಯೋಗಕ್ಷೇಮ ಈಗ ಸುಮಲತಾ ಹೆಗಲಿಗೆ ಬಿದ್ದಿದೆ.
ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ನೂತನ ಸಂಸದರಿಗೆ ಶುಭಾಶಯ ತಿಳಿಸಿ, ಸುಮಲತಾ ಅವರು ರೈತರಿಗೆ ನೀರು ಬಿಡಿಸುವ ಹೊಣೆ ಇದೆ ಅನ್ನೋ ಮೂಲಕ ಹೊಸ ಜವಾಬ್ದಾರಿ ವಹಿಸಿದ್ದಾರೆ. ನಾಲೆಗಳಿಗೆ ನೀರು ಹರಿಸೋ ಹೊಣೆ ಸುಮಲತಾ ಅವರದ್ದು. ಈ ಲೋಕಸಭಾ ಚುನಾವಣೆ ಅನುಕಂಪದ ಆಧಾರದಲ್ಲಿ ಫಲ ಪಡೆದಿದೆ. ಸುಮಲತಾ ಅವರು ಬರೀ ಪಕ್ಷೇತರ ಅಭ್ಯರ್ಥಿಯಾಗಿ ಉಳಿದಿಲ್ಲ. ಅವರು ಈಗ ನಮ್ಮ ಜಿಲ್ಲೆಯ ಸಂಸದೆ. ಹೀಗಾಗಿ ಅವರನ್ನು ಅಭಿನಂದಿಸುತ್ತೇನೆ.
ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ನಮ್ಮ ಜಿಲ್ಲೆಯ ನಾಲೆಗಳಿಗೆ ನೀರು ಹರಿಸುವ ವಿಷ್ಯದಲ್ಲಿ ನಮಗೆ ಸಪೋರ್ಟ್ ಸಿಕ್ಕಂತೆ ಆಗಿದೆ. ಯಾಕೆಂದರೆ, ನೀರು ನಿರ್ವಹಣಾ ಮಂಡಳಿ ಕೇಂದ್ರದ ಸುಪರ್ದಿಯಲ್ಲಿದೆ. ಸುಮಲತಾ ಅವರು ಸಂಸದರಾಗಿರುವುದಿಂದ ಜಿಲ್ಲೆಯ ಜನರಿಗೆ ಕೇಳಿದಾಗ ನೀರು ಬಿಡಿಸಿಕೊಡುತ್ತಾರೆ. ಇದ್ರಿಂದ ಜಿಲ್ಲೆಯ ಜನರಿಗೆ ನ್ಯಾಯ ಸಿಗಲಿದೆ. ನಮ್ಮ ಜವಾಬ್ದಾರಿಗಳನ್ನು ಅವರು ಸ್ವಲ್ಪ ತೆಗೆದುಕೊಂಡಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ರೈತರ ಪರ, ಬಡವರ ಪರ ಇರಿ ಎಂದು ಅವರನ್ನು ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಬೆಳೆಗಳು ಒಣಗುತ್ತಿದ್ದು, ರೈತರ ಬೆಳೆಗಳಿಗೆ ನೀರು ಬಿಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಇದೀಗ ಕೆಆರ್‌ಎಸ್‌ನಿಂದ ರೈತರ ಬೆಳೆಗಳಿಗೆ ನೀರು ಬಿಡಿಸುವ ಜವಾಬ್ದಾರಿಯನ್ನು ಸಂಸದೆ ಸುಮಲತಾ ಹೆಗಲಿಗೆ ಹೊರಿಸಿದ ರವೀಂದ್ರರ ನಡೆ ಈಗ ಚರ್ಚೆಗೆ ಕಾರಣವಾಗಿದೆ.