ಕರ್ನಾಟಕ

karnataka

ETV Bharat / state

ನಾರಾಯಣಗೌಡನ ಪುರಾಣ ಬಿಚ್ಚಿಡ್ತೀನಿ: ಹೆಚ್​ಡಿಕೆ ಎಚ್ಚರಿಕೆ - ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ

ನಾರಾಯಣಗೌಡನ ಪುರಾಣವನ್ನು ಬಿಚ್ಚಿಡ್ತೀನಿ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್​​. ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮ ನಿಮಿತ್ತ ಕೆ.ಆರ್. ಪೇಟೆಗೆ ಆಗಮಿಸಿದ ವೇಳೆ ಹೆಚ್​ಡಿಕೆ ಹೇಳಿಕೆ ನೀಡಿದ್ದಾರೆ.

ನಾರಾಯಣಗೌಡನ ಪುರಾಣ ಬಿಚ್ಚಿಡ್ತೀನಿ: ಹೆಚ್​ಡಿಕೆ

By

Published : Nov 14, 2019, 9:27 PM IST

ಮಂಡ್ಯ: ಶೀಘ್ರದಲ್ಲಿ ಕೆ.ಆರ್.ಪೇಟೆಗೆ ಆಗಮಿಸುತ್ತೇನೆ. ನಾರಾಯಣಗೌಡನ ಪುರಾಣವನ್ನು ಬಿಚ್ಚಿಡ್ತೀನಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಬಿಜೆಪಿ ಸಂಭವೀಯ ಅಭ್ಯರ್ಥಿ ನಾರಾಯಣಗೌಡಗೆ ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ಕಾರ್ಯಕ್ರಮ ನಿಮಿತ್ತ ಕೆ.ಆರ್. ಪೇಟೆಗೆ ಆಗಮಿಸಿದ್ದ ಕುಮಾರಸ್ವಾಮಿ, ನನ್ನ ಕುಟುಂಬವನ್ನು ಎದುರು ಹಾಕಿಕೊಂಡು ಆತನಿಗೆ ಟಿಕೆಟ್ ನೀಡಿದ್ದೆ. ಈಗ ಯಡಿಯೂರಪ್ಪನೇ ಇಂದ್ರ, ಚಂದ್ರ ಎನ್ನುತ್ತಿದ್ದಾನೆ ಎಂದು ಏಕ ವಚನದಲ್ಲಿಯೇ ವಾಗ್ದಾಳಿ ಮಾಡಿದರು.

ನಾರಾಯಣಗೌಡನ ಪುರಾಣ ಬಿಚ್ಚಿಡ್ತೀನಿ - ಹೆಚ್​ಡಿಕೆ

ಸಿಎಂ ಆಗಿದ್ದಾಗ ಕೆ.ಆರ್.ಪೇಟೆಗೆ ಎಂಜಿನಿಯರಿಂಗ್ ಕಾಲೇಜು ನೀಡಿದೆ. ಆತನನ್ನು ಕೇಳಿಕೊಂಡು ಅನುದಾನ ನೀಡಬೇಕಾ? ನಾನೇ ಸಿಎಂ ಆಗಿದ್ದಾಗ ನನಗೆ ಗೊತ್ತಿರಲಿಲ್ವಾ ಎಂದು ಪ್ರಶ್ನೆ ಮಾಡಿ, ರೈತರ ಸಾಲ ಮನ್ನಾ ಮಾಡಿದ ನನ್ನ ಸರ್ಕಾರವನ್ನು ಬೀಳಿಸಿದ ನಾರಾಯಣಗೌಡಗೆ ಬುದ್ಧಿ ಕಲಿಸಬೇಕು ಎಂದು ಮನವಿ ಮಾಡಿದರು.

ನಾನು ಮಂಜೂರು ಮಾಡಿದ ಯೋಜನೆಗಳನ್ನು ಯಡಿಯೂರಪ್ಪ ಬಿಡುಗಡೆ ಮಾಡಿದರು ಎಂದು ಹೇಳುತ್ತಿದ್ದಾನೆ. ದಾಖಲೆಗಳನ್ನು ನೋಡಿದರೆ ನಿಮಗೆ ಗೊತ್ತಾಗುತ್ತದೆ ಎಂದು ಸಾರ್ವಜನಿಕರಿಗೆ ಮಾಜಿ ಸಿಎಂ ಸಲಹೆ ನೀಡಿದರು.

ABOUT THE AUTHOR

...view details