ಕರ್ನಾಟಕ

karnataka

By

Published : Aug 6, 2019, 9:17 AM IST

ETV Bharat / state

ನಾಗರ ಪಂಚಮಿ: ಮಂಡ್ಯ,ಕಲಬುರಗಿಯಲ್ಲಿ ವಿಶೇಷ ಆಚರಣೆ

ಮಂಡ್ಯ ಹಾಗೂ ಕಲಬುರಗಿಯಲ್ಲಿ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ನಾಗರ ಪಂಚಮಿಯನ್ನು ಬಸವಪಂಚಮಿಯನ್ನಾಗಿ ಆಚರಿಸಲಾಯಿತು.

ನಾಗರ ಪಂಚಮಿ ಆಚರಣೆ

ಮಂಡ್ಯ/ಕಲಬುರಗಿ :ನಾಗರ ಪಂಚಮಿ ಪ್ರಯುಕ್ತ ಹುತ್ತಗಳ ಬಳಿ ತೆರಳಿ ಭಕ್ತರು ತನಿ ಎರೆದು ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ ಮಂಡ್ಯ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಬಸವ ಫೌಂಡೇಶನ್ ವತಿಯಿಂದ​ ವಿಶಿಷ್ಟವಾಗಿ ನಾಗನ ಪೂಜೆ ಮಾಡಲಾಯಿತು.

ವಿಶಿಷ್ಟವಾಗಿ ನಾಗರ ಪಂಚಮಿ ಆಚರಣೆ

ಶಾಲಾ ಮಕ್ಕಳಿಗೆ ಹಾಲು ವಿತರಣೆ:

ಮಂಡ್ಯದಲ್ಲಿ ಕಾಯಕಯೋಗಿ ಪ್ರತಿಷ್ಠಾನದ ವತಿಯಿಂದ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸಿದ್ದು, ಶಾಲಾ ಮಕ್ಕಳಿಗೆ ಹಾಲು ಹಾಗೂ ಬಿಸ್ಕೆಟ್ ನೀಡುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು. ನಗರದ ಕಾಳಿಕಾಂಭ ಡವರಿ ಕಾಲೋನಿಯಲ್ಲಿನ ಸರ್ಕಾರಿ ಶಾಲೆ ಮಕ್ಕಳಿಗೆ ಹಾಲು ವಿತರಣೆ ಮಾಡಲಾಯಿತು.

ಕಲುಬುರಗಿಯಲ್ಲಿ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಸ್ಥಾಪಿತ ಮಾನವ ಬಂಧುತ್ವ ವೇದಿಕೆ ವತಿಯಿಂದ ಅಪೌಷ್ಟಿಕತೆಯಿಂದ ಬಳಲುತಿರುವ ಮಕ್ಕಳಿಗೆ ಬಿಸಿ ಹಾಲು ವಿತರಿಸುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ನಾಗೇಂದ್ರ ಜವಳಿ ನೇತೃತ್ವದಲ್ಲಿ ನಗರದ ಬಾಲ ಭವನ‌‌ ಸೇರಿದಂತೆ ವಿವಿಧೆಡೆ ಸಂಚರಿಸಿ ಆಶ್ರಮವಾಸಿಗಳಿಗೆ, ರೋಗಿಗಳಿಗೆ, ಅಪೌಷ್ಟಿಕತೆಯಿಂದ ಬಳಲುತ್ತಿರು ಮಕ್ಕಳಿಗೆ ಬಿಸಿ ಹಾಲು ವಿತರಿಸಿದ್ರು.

ABOUT THE AUTHOR

...view details