ಮಂಡ್ಯ:ಮೈಸೂರು ಮಹಾರಾಜ ಯದುವೀರ್ ಬಗ್ಗೆ ಜನವಾದಿ ಸಂಘಟನೆಯ ಹೋರಾಟಗಾರ್ತಿ ಕುಮಾರಿ ಅವರು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.
ಮಹಾರಾಜ ಯದುವೀರ್ ವಿರುದ್ಧವೇ ತಿರುಗಿಬಿದ್ದ 'ಮೈಶುಗರ್' ಹೋರಾಟಗಾರರು - mandya mysugar news
ಯದುವೀರ್ ಅವರನ್ನು ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಭೇಟಿ ಮಾಡಿದ ವಿಚಾರವಾಗಿ, ಜನವಾದಿ ಸಂಘಟನೆಯ ಕುಮಾರಿ ಪ್ರತಿಕ್ರಿಯಿಸಿದ್ದಾರೆ. ಮುರುಗೇಶ್ ನಿರಾಣಿ ಮಹಾರಾಜರನ್ನು ಭೇಟಿಯಾದ ನಂತರ, ಯದುವೀರ್ ಮೈಶುಗರ್ನ್ನು ಒ ಅಂಡ್ ಎಂ ಗೆ ನೀಡುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಮೈಶುಗರ್ ಹೋರಾಟಗಾರರು
ಯದುವೀರ್ ಅವರನ್ನು ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಭೇಟಿ ಮಾಡಿದ ವಿಚಾರವಾಗಿ, ಜನವಾದಿ ಸಂಘಟನೆಯ ಕುಮಾರಿ ಮಾತನಾಡಿದ್ದಾರೆ. ಮುರುಗೇಶ್ ನಿರಾಣಿ ಮಹಾರಾಜರನ್ನು ಭೇಟಿಯಾದ ನಂತರ, ಯದುವೀರ್ ಮೈಶುಗರ್ನ್ನು ಒ ಅಂಡ್ ಎಂ ಗೆ ನೀಡುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮೈಶುಗರ್ ಕಾರ್ಖಾನೆಯನ್ನು ಮಹಾರಾಜರು ಸಾರ್ವಜನಿಕ ಆಸ್ತಿಯಾಗಿ ಉಳಿಸಿಕೊಂಡಿದ್ದರು. ಅದೇ ರೀತಿಯಾಗಿ ಇಂದಿಗೂ ಕಂಪನಿ ಉಳಿದುಕೊಳ್ಳಬೇಕು. ಕಾರ್ಖಾನೆಯನ್ನು ಒ ಅಂಡ್ ಎಂ ಆಧಾರದಲ್ಲಿ ಪ್ರಾರಂಭಿಸುವ ಬದಲು ಸರ್ಕಾರವೇ ನಡೆಸಬೇಕೆಂದು ಕುಮಾರಿ ಆಗ್ರಹಿಸಿದರು.