ಕರ್ನಾಟಕ

karnataka

ETV Bharat / state

ಗುಂಪುಗಾರಿಕೆಯಿಂದಲೇ ಮುಚ್ಚಿ ಹೋಗಲಿದ್ಯಾ ಮೈಶುಗರ್​ ಕಾರ್ಖಾನೆ? - Acetate factory

ಮಂಡ್ಯದ ಮೈಶುಗರ್ ಕಾರ್ಖಾನೆ ಖಾಸಗಿದವರಿಗೆ ಮಾರಾಟವಾಗಲಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿರುವ ನಡುವೆ ಕಾರ್ಖಾನೆಯಲ್ಲಿಯ ಗೊಂದಲ ಹಾಗೂ ಗುಂಪುಗಾರಿಕೆಯೇ ಕಾರ್ಖಾನೆಯ ಅವನತಿಗೆ ಕಾರಣವಾಗಲಿದ್ಯಾ ಎಂಬ ಅನುಮಾನ ಸಹ ಮೂಡಿದೆ.

Mysugar Factory will closing By grouping itself..?
ಗುಂಪುಗಾರಿಕೆಯಿಂದಲೇ ಮುಚ್ಚಿ ಹೋಗಲಿದ್ಯಾ ಮೈಶುಗರ್​ ಕಾರ್ಖಾನೆ..?

By

Published : Jun 6, 2020, 11:51 PM IST

ಮಂಡ್ಯ: ಜಿಲ್ಲೆಯ ಆರ್ಥಿಕತೆಯ ಜೀವಾಳವಾಗಿದ್ದ ಮೈಶುಗರ್ ಕಾರ್ಖಾನೆಗೆ ಕಂಟಕ ಎದುರಾಗಿದೆ. ಸರ್ಕಾರದ ನಿರ್ಧಾರ ಏನು ಎಂಬುದು ತಿಳಿಯೋದಕ್ಕೂ ಮೊದಲೇ ಅಸಿಟೇಟ್ ಕಾರ್ಖಾನೆಯಂತೆ ಮುಚ್ಚಲಿದೆಯಾ ಎಂಬ ಆತಂಕವೂ ಶುರುವಾಗಿದೆ.

ಮೈಶುಗರ್ ಕಾರ್ಖಾನೆ ಗುಂಪುಗಾರಿಕೆಯಿಂದ ನರಳುತ್ತಿದೆ. ರೈತ ಮುಖಂಡರ ದ್ವಂದ್ವತೆ, ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ ಮೈಶುಗರ್‌ಗೆ ಕಂಕಟವಾಗಲಿದೆ. ಇತ್ತೀಚೆಗಷ್ಟೇ ಜಿಲ್ಲಾ ಉಸ್ತುವಾರಿ ಸಚಿವರು ಗುಂಪುಗಾರಿಕೆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಈ ವಿಷಯವೇ ಈಗ ಮೈಶುಗರ್ ಬಗ್ಗೆ ಚಿಂತೆಗೀಡು ಮಾಡಿದೆ.

ಮೈಶುಗರ್ ವಿಚಾರದಲ್ಲಿ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಮುಂದಾಗದೇ ಕೈಕಟ್ಟಿ ಕುಳಿತಿದೆ. ಹೀಗಾಗಿ ಮೈಶುಗರ್ ಮುಚ್ಚಲಿದೆಯಾ ಎಂಬ ಅನುಮಾನ ಮೂಡಿಸುತ್ತಿದೆ. ಈ ಹಿಂದೆ ಏಷ್ಯಾ ಖಂಡದಲ್ಲೇ ಏಕೈಕವಾಗಿದ್ದ ಅಸಿಟೇಟ್ ಕಾರ್ಖಾನೆ ಕಚ್ಚಾವಸ್ತುಗಳ ಕೊರತೆಯಿಂದ ಮುಚ್ಚಿತ್ತು.

ಕಾರ್ಖಾನೆಯ ಕೋಟ್ಯಂತರ ರೂಪಾಯಿ ಆಸ್ತಿಯನ್ನು ಸರ್ಕಾರ ಹರಾಜು ಹಾಕಿ ಕೈ ಮುಗಿದು ಹೋಗಿತ್ತು. ಅದೇ ರೀತಿಯಲ್ಲಿ ಮೈಶುಗರ್ ಆಗಲಿದೆಯಾ ಎಂಬ ಪ್ರಶ್ನೆ ಎದ್ದಿದೆ. ಮತ್ತೊಂದು ಕಡೆ ಮೈಶುಗರ್ ಒ ಅಂಡ್ ಎಂ ಅಡಿಯಲ್ಲಿ ಖಾಸಗಿ ಕಂಪನಿಗೆ ನೀಡಲು ಮುಂದಾಗಿತ್ತು. ಆದರೆ ರೈತ ಮುಖಂಡರ ದ್ವಂದ್ವತೆಯಿಂದ ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಪ್ರಭಾವಿ ರಾಜಕಾರಣಿ ಮುರುಗೇಶ್ ನಿರಾಣಿ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಹೋಗಿದ್ದರು‌.

ಈಗ ಅವರಿಗೆ ಸರ್ಕಾರ ಒ ಅಂಡ್ ಎಂಗೆ ಕೊಡಬಹುದು ಎಂಬ ಮಾತುಗಳು ಕೇಳಿ ಬಂದಿವೆ. ಏನೇ ಆಗಲಿ ಒಗ್ಗಟ್ಟಿನಲ್ಲಿ ಇರಬೇಕಾದ ರೈತ ಮುಖಂಡರು ದ್ವಂದ್ವದಲ್ಲಿದ್ದಾರೆ. ಇದು ಮೈಶುಗರ್‌ ವಿಚಾರದಲ್ಲಿ ಮುಳ್ಳಾಗುವ ಮೊದಲು ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲವಾದರೆ ಅಸಿಟೇಟ್ ಕಾರ್ಖಾನೆಗೆ ಆದ ಪರಿಸ್ಥಿತಿ ಮೈಶುಗರ್‌ಗೆ ಬಂದರೂ ಅಚ್ಚರಿ ಇಲ್ಲ.

ABOUT THE AUTHOR

...view details