ಮಂಡ್ಯ: ಹಾಸನ, ಮಂಡ್ಯ ಹಾಗು ಮೈಸೂರು ಭಾಗದಲ್ಲಿ ಬಿಜೆಪಿಗೆ ವೇಗ ಸಿಗಬೇಕು ಎಂಬುದಿತ್ತು. ಅದರ ಮೊದಲ ಪ್ರಯತ್ನದಲ್ಲೇ ಮೈಸೂರು ಮೇಯರ್ ಸ್ಥಾನ ಗೆದ್ದಿದ್ದೇವೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಮೈಸೂರು ಮೇಯರ್ ಸ್ಥಾನದ ಗೆಲುವಿನಿಂದ ಈ ಭಾಗದಲ್ಲಿ ಬಿಜೆಪಿಗೆ ವೇಗ ಸಿಕ್ಕಿದೆ: ಕಟೀಲ್ ಮಂಡ್ಯದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ ಯಶಸ್ವಿಯಾಗಿ ನಡೆದಿದೆ. ಬಿಜೆಪಿ ಪರವಾದ ವಾತಾವರಣ ಇಲ್ಲಿದೆ. ಕಾಂಗ್ರೆಸ್ ಬಳಿ ವಿಷಯಗಳಿಲ್ಲ, ಬೌದ್ದಿಕವಾಗಿ ದಿವಾಳಿಯಾಗಿದೆ. ಅಲ್ಲದೇ ಕೇಂದ್ರದಲ್ಲಿ ಲೋಕಸಭೆ ಕಲಾಪ ನಿಲ್ಲಿಸುವ ಷಡ್ಯಂತ್ರ ಕಾಂಗ್ರೆಸ್‌ನವರದ್ದು. ವಿರೋಧ ಪಕ್ಷವಾಗಿ ಜವಾಬ್ದಾರಿಯುತ ನಡೆ ತೋರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ: ಮುಂದಿನ 20 ವರ್ಷ ಬಿಜೆಪಿ ಸರ್ಕಾರ ಇರುತ್ತೆ : ನಳೀನ್ ಕುಮಾರ್ ಕಟೀಲ್
ರಾಜ್ಯದ ಪದಾಧಿಕಾರಿಗಳ ಆಯ್ಕೆ ಮಾಡದ ಕಾಂಗ್ರೆಸ್
ಚೀನಾ, ಪಾಕಿಸ್ತಾನಕ್ಕೆ ಬೆಂಬಲ ಕೊಡುವಂತದ್ದನ್ನು ಕಾಂಗ್ರೆಸ್‌ನವರು ಮಾಡ್ತಾರೆ. ಕಾಶ್ಮೀರ ಪ್ರತ್ಯೇಕ ಎಂಬ ಹೇಳಿಕೆಯನ್ನು ಪಂಜಾಬ್ ಕಾಂಗ್ರೆಸ್‌ನ ಪ್ರಮುಖರು ನೀಡಿದ್ದಾರೆ. ಕೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ಇಬ್ಭಾಗವಾಗಿದೆ. ಹೀಗಾಗಿ ರಾಜ್ಯದಲ್ಲಿ ಸಿದ್ರಾಮಣ್ಣ, ಡಿಕೆಶಿ ಜಗಳ ಪ್ರಾರಂಭವಾಗಿದೆ. ಅಲ್ಲದೆ ಯಾರು ಸಿಎಂ ಎನ್ನುವ ವಿಚಾರಕ್ಕೆ ಹೋಗಿ ರಾಜ್ಯದ ಪದಾಧಿಕಾರಿಗಳ ಆಯ್ಕೆಯನ್ನೇ ಕಾಂಗ್ರೆಸ್ ಮಾಡಿಲ್ಲ ಎಂದು ವ್ಯಂಗ್ಯವಾಡಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ದೆಹಲಿ ಪ್ರವಾಸ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಟೀಲ್, ಬೇರೆ ಬೇರೆ ಕಾರಣಗಳಿಗೆ ಸಿಎಂ ದೆಹಲಿಗೆ ಹೋಗ್ತಿದ್ದಾರೆ. ಮಾತುಕತೆ ನಡೆಸಿ ಹಿರಿಯರ ಮಾರ್ಗದರ್ಶನದಂತೆ ನಡೆಯಲಿದ್ದಾರೆ ಎಂದರು.
'ಯತ್ನಾಳ್‌ಗೆ ಎಚ್ಚರಿಕೆ ನೀಡಲಾಗಿದೆ'
ಸರ್ಕಾರ ವಿರುದ್ಧ ಮತ್ತೆ ಯತ್ನಾಳ್ ವಾಗ್ದಾಳಿ ವಿಚಾರವಾಗಿ ಮಾತನಾಡಿ, ಯತ್ನಾಳ್ ಅವರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ರಾಷ್ಟ್ರೀಯ ಶಿಸ್ತು ಸಮಿತಿ ಎಲ್ಲವನ್ನೂ ಗಮನಿಸುತ್ತಿದೆ ಎಂದು ಹೇಳಿದರು.
ಬಿಬಿಎಂಪಿ ಸ್ವೆಟರ್ ಹಗರಣದಲ್ಲಿ ನಟ ಕೋಮಲ್ ಹೆಸರು ಕೇಳಿ ಬಂದ ವಿಚಾರಕ್ಕೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ, ವರದಿ ತರಿಸಿಕೊಳ್ಳುತ್ತೇನೆ ಎಂದರು.