ಮಂಡ್ಯ: ಕೆಆರ್ಎಸ್ನಲ್ಲಿ ಆಗುತ್ತಿರುವ ಶಬ್ಧದ ಬಗ್ಗೆ ಭೂಮಾಪನ ಕೇಂದ್ರ ಅಧ್ಯಯನ ಪ್ರಾರ್ಥಮಿಕ ವರದಿ ನೀಡಿದೆ. ಇದು ಜಿಲ್ಲೆಯ ರೈತರಲ್ಲಿ ಭಯ ಹುಟ್ಟಿಸಿದೆ. ಈ ವರದಿಗೆ ಮೈಸೂರು ಎಂಜಿನಿಯರ್ಸ್ ತಂಡ ಅನುಮೋದನೆ ನೀಡಿದೆ.
ವರದಿ ಬಗ್ಗೆ ಎಚ್ಚೆತ್ತುಕೊಳ್ಳದೆ ಇದ್ದರೆ ಮುಂದೊಂದು ದಿನ ಕೆಆರ್ಎಸ್ ಅಣೆಕಟ್ಟೆ ಅಪಾಯಕ್ಕೆ ಸಿಲುಕುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದೆ. 80 ವರ್ಷಗಳ ಹಳೆಯದಾದ ಚಿರುಕಿ ಗಾರೆಯಿಂದಷ್ಟೇ ನಿರ್ಮಾಣವಾಗಿರುವ ಈ ಅಣೆಕಟ್ಟೆ ಬಗ್ಗೆ ಅಂಪೂರ್ಣ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಬೇಕಾದ ಅನಿವಾರ್ಯತೆ ಈಗ ರಾಜ್ಯ ಸರ್ಕಾರದ ಮೇಲಿದೆ.
2018ರ ಸೆಪ್ಟಂಬರ್ 25ರಂದು ರಾಜ್ಯ ಭೂಕಂಪ ಮಾಪನ ಸಂಸ್ಥೆ ವರದಿ ನೀಡಿತ್ತು. ವರದಿಯ ಪ್ರಕಾರ ಅಣೆಕಟ್ಟೆಯ ಸುತ್ತ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ ಮಾಡಿದರೆ ಉತ್ತಮ, ಇಲ್ಲವಾದರೆ ಅಣೆಕಟ್ಟೆಗೆ ಅಪಾಯ ಎಂಬುದು ಆ ವರದಿಯ ಸಾರಾಂಶ. ಈ ಸಾರಾಂಶವನ್ನೇ ಮುಂದಿಟ್ಟುಕೊಂಡು ಮೈಸೂರು ಎಂಜಿನಿಯರ್ಸ್ ತಂಡ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.
ಕೆಆರ್ಎಸ್ಗೆ ಕಾದಿದೆ ಆಪತ್ತು.. ಪ್ರಸ್ತುತ ಕೆಆರ್ಎಸ್ ಅಣೆಕಟ್ಟೆ ತುಂಬಿದೆ. ಹೀಗಾಗಿ ಜಿಲ್ಲಾಡಳಿತ ತಾತ್ಕಾಲಿಕವಾಗಿ ಕಲ್ಲುಗಣಿಗಾರಿಕೆ ಹಾಗೂ ಸ್ಫೋಟಕ ಬಳಕೆಗೆ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಅಣೆಕಟ್ಟೆಯ ಭದ್ರತೆಯ ಬಗ್ಗೆ ಚಿಂತೆ ಎದುರಾಗಿದೆ. ಬೇಬಿಬೆಟ್ಟ, ಚಿನಕುರುಳಿ ಹಾಗೂ ರಾಗಿಮುದ್ದನಹಳ್ಳಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಹಾಗೂ ರಿಗ್ ಬೋರ್ ಬ್ಲಾಸ್ಟ್‌ನಿಂದಪ್ರಮುಖವಾಗಿ ಅಣೆಕಟ್ಟೆಗೆ ಅಪಾಯದೆ.ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಅಣೆಕಟ್ಟೆಯ ಭದ್ರತೆ ಕುರಿತು ತನಿಖಾ ವರದಿ ಮಾಡಿಸುವ ಬಗ್ಗೆ ಹೇಳಲಾಗಿತ್ತು. ಆದರೆ, ಇನ್ನೂ ತನಿಖಾ ತಂಡವೇ ಅಣೆಕಟ್ಟೆಗೆ ಭೇಟಿ ನೀಡಿಲ್ಲ.
ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಬ್ರೇಕ್ :
ಕಳೆದ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕೆಆರ್ಎಸ್ ಬಳಿ ಸಿಡ್ನಿಲ್ಯಾಂಡ್ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತು. ಇದಕ್ಕೆ ಪ್ರತಿರೋಧವೂ ಎದುರಾಗಿತ್ತು. ಜೊತೆಗೆ ಕಾವೇರಿ ಮಾತೆಯ ಬೃಹತ್ ಪುತ್ಥಳಿ ನಿರ್ಮಾಣದಿಂದ ಅಣೆಕಟ್ಟೆಗೆ ಅಪಾಯ ಎಂಬ ವಾದವೂ ಬಂದಿತ್ತು. ವಾದದ ಹಿನ್ನೆಲೆಯಲ್ಲಿ ವಾಸ್ತವ ಚಿತ್ರಣಕ್ಕಾಗಿ ತಂಡ ರಚನೆಗೆ ಸರ್ಕಾರ ಮುಂದಾಗಿತ್ತು. ಆದರೆ, ಈವರೆಗೂ ತಂಡದ ವರದಿಯೇ ಸಿದ್ಧವಾಗಿಲ್ಲ. ಇನ್ನು ಸರ್ಕಾರದ ಬದಲಾವಣೆ ಹಾಗೂ ಭೂಕಂಪನ ಕೇಂದ್ರದ ವರದಿ, ಮೈಸೂರು ಎಂಜಿನಿಯರ್‌ಗಳ ವರದಿ, ಸಿಡ್ನಿಲ್ಯಾಂಡ್ ಮಾದರಿ ಜೊತೆಗೆ ಕಾವೇರಿ ಮಾತೆಯ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಬ್ರೇಕ್ ಹಾಕುವ ಸಾಧ್ಯತೆ ಇದೆ.