ಮಂಡ್ಯ: ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತುವುದೇ ನನ್ನ ನಿಲುವು ಎಂದು ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಸಚಿವರೊಂದಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಸದೆಯಾಗಿ ಪಾರ್ಲಿಮೆಂಟ್ ಪ್ರವೇಶ ಮಾಡಿದ ದಿನದಿಂದ ಅಕ್ರಮ ಗಣಿಗಾರಿಗೆ ತಡೆಯುವುದೇ ನನ್ನ ನಿಲುವಾಗಿತ್ತು. ಹೀಗಾಗಿ ಕೆಆರ್ಎಸ್ ಡ್ಯಾಂ ಸುರಕ್ಷತೆಗಾಗಿ ಧ್ವನಿ ಎತ್ತಿದ್ದೇನೆ. ಕನ್ನಂಬಾಡಿ ಕಟ್ಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅಲ್ಲಿ ಬ್ಲಾಸ್ಟ್ ಮಾಡಿದರೆ ಕೆಆರ್ಎಸ್ಗೆ ತೊಂದರೆಯಾಗುತ್ತದೆ. ಹೀಗಾಗಿ ಗಣಿಗಾರಿಕೆಯನ್ನ ನಿಲ್ಲಿಸಬೇಕು ಎಂದರು.
ಒಂದು ವರ್ಷದಿಂದ ಕೊರೊನಾದಿಂದ ನಮ್ಮ ಜಿಲ್ಲೆಗೆ ನಷ್ಟವಾಗಿರುವುದರಿಂದ ಬೇರೆ ಬೇರೆ ಫಂಡ್ಸ್, ಬರ್ತಿಲ್ಲಾ. ಆದ್ದರಿಂದ ನಾವು ಜಿಲ್ಲಾ ಮೈನಿಂಗ್ ಫಂಡ್ ಇದೆ. ರಾಯಲ್ಟಿಯಿಂದ ಅಭಿವೃದ್ಧಿಗೆ ಉಪಯೋಗಿಸಬಹುದು, ರಾಯಲ್ಟಿ ಕಟ್ಟದೆ ತಪ್ಪಿಸಿಕೊಳ್ಳುವ ಕೆಲಸ ಮಾಡಬಾರದು ಎಂದು ಎಚ್ಚರಿಸಿದರು.