ಮಂಡ್ಯ:ಕೊಟ್ಟ ಸಾಲ ವಾಪಸ್ ಕೇಳಲು ಹೋದ ಮಹಿಳೆಯೇ ಕೊಲೆಗೀಡಾಗಿರುವ ಘಟನೆ ಮದ್ದೂರು ತಾಲೂಕಿನ ಹಾಗಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಮಹಿಳೆಯ ಕೊಲೆ... ಮೃತದೇಹವನ್ನು ಡ್ರಮ್‌ನಲ್ಲಿ ಮುಚ್ಚಿಟ್ಟಿದ್ದ ಆರೋಪಿಗೆ ಹಿಗ್ಗಾಮುಗ್ಗಾ ಥಳಿತ - ಸಾಲ ವಾಪಾಸ್ ಕೇಳಲು ಹೋದ ಮಹಿಳೆಯ ಕೊಲೆ
ಕೊಟ್ಟ ಸಾಲವನ್ನು ವಾಪಸ್ ಕೇಳಲು ಹೋದ ಮಹಿಳೆಯೇ ಕೊಲೆಯಾದ ಘಟನೆ ಮದ್ದೂರು ತಾಲೂಕಿನ ಹಾಗಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೊಲೆ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
![ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಮಹಿಳೆಯ ಕೊಲೆ... ಮೃತದೇಹವನ್ನು ಡ್ರಮ್‌ನಲ್ಲಿ ಮುಚ್ಚಿಟ್ಟಿದ್ದ ಆರೋಪಿಗೆ ಹಿಗ್ಗಾಮುಗ್ಗಾ ಥಳಿತ women Murder accused arrest](https://etvbharatimages.akamaized.net/etvbharat/prod-images/768-512-6212826-thumbnail-3x2-hrss.jpg)
ಮಹಿಳೆಯ ಕೊಲೆ
ಶೋಭಾ ಪಾಪೇಗೌಡ ಕೊಲೆಯಾದ ಮಹಿಳೆ. ಅದೇ ಗ್ರಾಮದ ಕೃಷ್ಣ ಎಂಬಾತ ಕೊಲೆ ಮಾಡಿ, ಮೃತದೇಹವನ್ನು ನೀರಿನ ಡ್ರಮ್‌ನಲ್ಲಿ ಮುಚ್ಚಿ ಪರಾರಿಯಾಗಲು ಯತ್ನಿಸಿ ಜನರ ಕೈಗೆ ಸಿಕ್ಕಿ ಬಿದ್ದು ಗೂಸಾ ತಿಂದಿದ್ದಾನೆ. ಕೊಲೆ ಆರೋಪಿಯನ್ನು ಬಂಧಿಸಿರುವ ಮದ್ದೂರು ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕೊಲೆ ಆರೋಪಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಜನರಿಂದ ಥಳಿತಕ್ಕೊಳಗಾಗಿರುವ ಆರೋಪಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Last Updated : Feb 26, 2020, 8:05 PM IST