ಕರ್ನಾಟಕ

karnataka

ETV Bharat / state

ಶೀಘ್ರದಲ್ಲೇ ಮುನಿರತ್ನ, ನಾಗೇಶ್​​​ಗೆ ಉತ್ತಮ ಸ್ಥಾನ - ಮಾನ ಸಿಗಲಿದೆ: ಸಚಿವ ನಾರಾಯಣಗೌಡ - ಸಚಿವ ನಾರಾಯಣಗೌಡ ಸುದ್ದಿ

ಸಿಡಿ ವಿಚಾರದ ಬಗ್ಗೆ ನನಗೆನೂ ಗೊತ್ತಿಲ್ಲ. ಪಕ್ಷದಲ್ಲಿ ಹಾಗೂ ಸರ್ಕಾರದಲ್ಲಿ ಒಳ್ಳೆಯ ಕೆಲಸ ಮಾಡಬೇಕು ಎಂದು ಬಂದಿರುವುದು ನಾವು. ಯಾವ ಸಿಡಿ ವಿಚಾರವೂ ನಮಗೆ ತಿಳಿದಿಲ್ಲ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.

Minister Narayanagowda
ಸಚಿವ ನಾರಾಯಣಗೌಡ

By

Published : Jan 14, 2021, 1:06 PM IST

Updated : Jan 14, 2021, 2:45 PM IST

ಮಂಡ್ಯ:ಮುನಿರತ್ನ ಹಾಗೂ ನಾಗೇಶ್‌ಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಮುನಿರತ್ನ ಹಾಗೂ ನಾಗೇಶ್ ಅವರಿಗೆ ಉತ್ತಮ ಸ್ಥಾನ-ಮಾನ ಸಿಗಲಿದೆ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೆ ಅವರಿಗೆ ಒಳ್ಳೆಯದಾಗುತ್ತದೆ ಎಂದ ಅವರು, ಯಡಿಯೂರಪ್ಪ ಮೇಲೆ ಯತ್ನಾಳ್ ಆಕ್ರೋಶ ವಿಚಾರವಾಗಿ ಪ್ರತಿಕ್ರಿಯೆ ನೀಡಿ ಪಕ್ಷದಲ್ಲಿ ಒಬ್ಬರು ಏನೋ ಮಾತನಾಡುತ್ತಾರೆ. ಎಲ್ಲಾ ಪಕ್ಷದಲ್ಲೂ ಹೀಗೆ ಇದ್ದಾರೆ. ಇವತ್ತು ಕೂಗಾಡುತ್ತಾರೆ ನಂತರ ಒಳಗೆ ಬಂದು ಸೇರಿಕೊಳ್ಳುತ್ತಾರೆ. ಮುಂದೆ ಎಲ್ಲರೂ ಸಮಾಧಾನವಾಗಿ ಹೋಗಬೇಕಾಗುತ್ತದೆ ಎಂದರು.

ಸಚಿವ ನಾರಾಯಣಗೌಡ

ನಾವು ಸಹ ಅವರಿಗೆ ಸಮಾಧಾನ ಹೇಳುವ ಕೆಲಸ ಮಾಡುತ್ತೇವೆ. ಸಿಡಿ ವಿಚಾರದ ಬಗ್ಗೆ ನನಗೆ ಏನು ಗೊತ್ತಿಲ್ಲ. ಪಕ್ಷದಲ್ಲಿ ಹಾಗೂ ಸರ್ಕಾರದಲ್ಲಿ ಒಳ್ಳೆಯ ಕೆಲಸ ಮಾಡಬೇಕು ಎಂದು ಬಂದಿರುವವರು ನಾವು. ಯಾವ ಸಿಡಿ ವಿಚಾರವೂ ನಮಗೆ ತಿಳಿದಿಲ್ಲ ಎಂದರು.

ಓದಿ...ಸಿಡಿ ಬಿಡುಗಡೆ ಆಗುತ್ತೆ, ಸತ್ಯಾಂಶ ಬಯಲಾಗುತ್ತದೆ: ಬಿಎಸ್​ವೈ ವಿರುದ್ಧ ಗುಡುಗಿದ ’ಹಳ್ಳಿಹಕ್ಕಿ’

ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಅವರಿಗೆ ಸಚಿವ ಸ್ಥಾನ ಸಿಗಬೇಕು ಎಂದು ಮನವಿ ಮಾಡುತ್ತೇನೆ. ಮುನಿರತ್ನಗೆ ಹಾಗೂ ವಿಶ್ವನಾಥ್‌ಗೆ ಸಚಿವ ಸ್ಥಾನ ಸಿಗಬೇಕು ಎಂದು ನಮ್ಮ ಒತ್ತಡ ಇದೆ. ವಿಶ್ವನಾಥ್ ಅವರು ಏನು ಮಾತಾಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಅವರು ನಾನು ಒಂದೇ ಪಕ್ಷದಲ್ಲಿ ಇದ್ದವರು. ನಾವು ಹೋಗಿ ಅವರ ಬಳಿ ಮಾತಮಾಡುತ್ತೇವೆ ಎಂದು ತಿಳಿಸಿದರು.

Last Updated : Jan 14, 2021, 2:45 PM IST

ABOUT THE AUTHOR

...view details