ಮಂಡ್ಯ:ರಾಜ್ಯದಲ್ಲಿ ಅಧಿಕಾರಕ್ಕಾಗಿ ಹೋರಾಟ ನಡೆಯುತ್ತಿದೆ. ಆದರೆ, ನಗರ ಸ್ಥಳೀಯ ಸಂಸ್ಥೆ ಚುನಾವಣೆ ನಡೆದು ವರ್ಷವಾಗುತ್ತಿದ್ದರೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿಲ್ಲ. ಇದರಿಂದ ಸದಸ್ಯರು ನಿರಾಸೆಯ ಜೊತೆಗೆ ಸರ್ಕಾರದ ನಡೆಗೆ ಅಸಮಾಧಾನ ಹೊರ ಹಾಕಿದ್ದಾರೆ.
ವರ್ಷವಾದ್ರೂ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಚುನಾವಣೆ ನಡೆದಿಲ್ಲ..
ಮಂಡ್ಯ ನಗರಸಭೆಗೆ ಚುನಾವಣೆ ನಡೆದು ವರ್ಷ ಕಳೆಯುತ್ತಿದೆ. ಅಂದರೆ ಅಗಸ್ಟ್ ತಿಂಗಳು ಬಂದರೆ ವರ್ಷವಾಗುತ್ತದೆ. ಆದರೆ, ಸರ್ಕಾರ ಈವರೆಗೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿಲ್ಲ.
ಮಂಡ್ಯ ನಗರಸಭೆಗೆ ಚುನಾವಣೆ ನಡೆದು ವರ್ಷ ಕಳೆಯುತ್ತಿದೆ. ಅಂದರೆ ಅಗಸ್ಟ್ ತಿಂಗಳು ಬಂದರೆ ವರ್ಷವಾಗುತ್ತದೆ. ಆದರೆ, ಸರ್ಕಾರ ಈವರೆಗೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿಲ್ಲ. ಇದರಿಂದ ನಗರದ ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬಿದ್ದಿವೆ. 35 ಸದಸ್ಯರ ಬಲದ ನಗರಸಭೆಯಲ್ಲಿ ಕಾಂಗ್ರೆಸ್‌ನ 10, ಜೆಡಿಎಸ್‌ನ 18, ಬಿಜೆಪಿಯ 2 ಹಾಗೂ ಪಕ್ಷೇತರರು 5 ಮಂದಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಬಹುಮತ ಸಾಧಿಸಿದ್ದರೂ ಸರ್ಕಾರದ ನಡೆಯಿಂದ ಸದಸ್ಯರಿಗೆ ಅಧಿಕಾರವೇ ಸಿಕ್ಕಿಲ್ಲ. ಇದು ಕೆಲ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ.
ಆಯ್ಕೆಯಾಗಿ 11 ತಿಂಗಳು ಕಳೆದಿದೆ. ಆದರೆ, ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದಿಲ್ಲ. ಬಜೆಟ್ ಮಂಡನೆಯಂತೂ ನಡೆದೇ ಇಲ್ಲ. ಇದು ನಗರದ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ. ಇನ್ನಾದರೂ ಸರ್ಕಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿ ಮಾಡಬೇಕಾಗಿದೆ.