ಕರ್ನಾಟಕ

karnataka

ETV Bharat / state

17 ಮಂದಿಗೆ ಕೋವಿಡ್ ಪಾಸಿಟಿವ್​​: ಮುಂಡುಗದೊರೆ ಗ್ರಾಮ ಸಂಪೂರ್ಣ ಸೀಲ್​​ಡೌನ್​ - ಶ್ರೀರಂಗಪಟ್ಟಣದಲ್ಲಿ ಕೋವಿಡ್ ಪ್ರಕರಣ

ಹದಿನೈದಕ್ಕೂ ಅಧಿಕ ಮಂದಿಗೆ ಕೋವಿಡ್​ ಸೋಂಕು ತಗುಲಿರುವ ಕಾರಣ ಶ್ರೀರಂಗಪಟ್ಟಣದ ಮುಂಡುಗದೊರೆ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇಡೀ ಗ್ರಾಮವನ್ನೇ ಸೀಲ್ ಡೌನ್ ಮಾಡಲಾಗಿದೆ.

Mundugadore Village Seal down due to Covid
ಮುಂಡುಗದೊರೆ ಗ್ರಾಮ ಸಂಪೂರ್ಣ ಸೀಲ್​​ಡೌನ್​

By

Published : May 1, 2021, 1:23 PM IST

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮುಂಡುಗದೊರೆ ಗ್ರಾಮದಲ್ಲಿ 17 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇಡೀ ಗ್ರಾಮವನ್ನೇ ಸೀಲ್ ಡೌನ್ ಮಾಡಲಾಗಿದೆ.

ಮುಂಡುಗದೊರೆ ಗ್ರಾಮ ಪಂಚಾಯತ್​ ಸಂಪೂರ್ಣ ಊರನ್ನೇ ಸೀಲ್ ಡೌನ್ ಮಾಡಿದ್ದು, ಊರಿನಿಂದ ಯಾರೂ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಗ್ರಾಮದಲ್ಲಿ ಇನ್ನೂ ಹಲವು ಮಂದಿಗೆ ಸೋಂಕು ತಗುಲುವ ಸಾಧ್ಯತೆ ಇದೆ. ಹೀಗಾಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ಓದಿ: ತುಮಕೂರಿನಲ್ಲಿ 80ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿಗೆ ವಕ್ಕರಿಸಿದ ಕೋವಿಡ್​

ಹಲವು ಮಂದಿಗೆ ಸೋಂಕು ತಗುಲಿರುವುದರಿಂದ ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು, ಜಿಲ್ಲಾಡಳಿತ ಎಲ್ಲಾ ರೀತಿಯ ಅಗತ್ಯ ಸೇವೆಗಳನ್ನು ಕಲ್ಪಿಸಲು ತಾಲೂಕು ಆಡಳಿತಕ್ಕೆ ಸೂಚಿಸಿದೆ.

ABOUT THE AUTHOR

...view details