ಮಂಡ್ಯ: ಜಿಲ್ಲೆಗೆ ಆವರಿಸಿದ್ದ ಮುಂಬೈ ಕೊರೊನಾ ನಂಜು ದೂರುವಾಗುವ ಕಾಲ ಬಂದಿದೆ. 82 ಪಾಸಿಟಿವ್ ಕೇಸ್ ಕಂಡ ಜಿಲ್ಲೆ ಕಳೆದ ಮೂರು ದಿನಗಳಿಂದ 2 ಪ್ರಕರಣಕ್ಕೆ ಬಂದು ನಿಂತಿದೆ.
ಮಂಡ್ಯ: ಮುಂಬೈನಿಂದ ಬಂದು ಕ್ವಾರಂಟೈನ್ ಆಗಿದ್ದವರ ಬಿಡುಗಡೆ - ಮುಂಬೈ ಕನ್ನಡಿಗರು ಬಿಡುಗಡೆ
ಮುಂಬೈ ಕನ್ನಡಿಗರು ಮಂಡ್ಯಕ್ಕೆ ಆಗಮಿಸಿದಾಗ 25ರಿಂದ 82 ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದ್ದವು. ಈಗ ಈ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಮುಂಬೈನಿಂದ ಆಗಮಿಸಿದ್ದವರನ್ನು ಕ್ವಾರಂಟೈನ್ ಮಾಡಿರುವುದು.
ಮುಂಬೈ ಕನ್ನಡಿಗರು ಜಿಲ್ಲೆಗೆ ಆಗಮಿಸಿದಾಗ 25ರಿಂದ 82 ಪ್ರಕರಣಗಳು ದಾಖಲಾಗಿದ್ದವು. ಈಗ ಈ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಮುಂಬೈನಿಂದ ಆಗಮಿಸಿದ್ದವರನ್ನು ಕ್ವಾರಂಟೈನ್ ಮಾಡಿರುವುದು. ಸದ್ಯ ಕ್ವಾರಂಟೈನ್ ಆದ ಕೆಲವರು ಈಗಾಗಲೇ ಅವಧಿ ಮುಗಿಸಿ ಹೋಂ ಕ್ವಾರಂಟೈನ್ಗೆ ಮರಳಿರುವುದು ಜಿಲ್ಲೆ ಜನತೆಗೆ ನೆಮ್ಮದಿ ನೀಡಿದ್ದು, ಕೊರೊನಾ ಮೂರನೇ ಸ್ಟೇಜ್ ಮುಟ್ಟಿಲ್ಲ ಎಂಬ ನಂಬಿಕೆ ಇದೆ.
ಮಂಡ್ಯ ಜಿಲ್ಲಾಧಿಕಾರಿ ಡಾ. ವೆಂಕಟೇಶ್, ಮಕ್ಕಳೂ ಸೇರಿದಂತೆ ಹಲವರನ್ನು ಪರೀಕ್ಷೆಗೆ ಒಳಪಡಿಸಿ ಸೋಂಕು ಇಲ್ಲ ಎಂದು ದೃಢಪಡಿಸಿಕೊಂಡು ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆ ಮಾಡಿದ್ದಾರೆ. ಸದ್ಯ ಮನೆಯಲ್ಲಿ ಬಂಧಿಯಾಗಿರುವ ಇವರು, ಜಿಲ್ಲಾಡಳಿತ ಸೂಚನೆ ನೀಡುವವರೆಗೂ ಮನೆಯಲ್ಲೇ ಇರಬೇಕಾಗಿದೆ.