ಸಂಸದೆ ಸುಮಾಲತಾ ವಿರುದ್ದ ಮಾತನಾಡುತ್ತಿರುವ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಮಂಡ್ಯ: ಮಂಡ್ಯ ಸಂಸದೆ ಅಪಪ್ರಬುದ್ಧ ರಾಜಕಾರಣಿ, ಅನಿರೀಕ್ಷಿತವಾಗಿ ಬಂದಂತಹ ಕೂಸು ಜೆಡಿಎಸ್ ಭದ್ರಕೋಟೆ ಛಿದ್ರ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಂಸದೆ ಸುಮಲತಾ ವಿರುದ್ದ ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.
ಸುಮಲತಾ ಒಬ್ಬ ಅಪಪ್ರಬುದ್ಧ ರಾಜಕಾರಣಿ-ಶಾಸಕ ರವೀಂದ್ರ:ಜೆಡಿಎಸ್ ಭದ್ರಕೋಟೆ ಗೋಡೆ ಒಡೆದಿದೆ ಸುಮಲತಾ ಹೇಳಿಕೆ ವಿಚಾರವಾಗಿ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಕೋಟೆ ಒಡೆದು ಹಾಕುತ್ತೇನೆ ಎಂದು ಪಾಪಾ ಎಂಪಿ ಕಸನು ಕಾಣುತ್ತಿದ್ದಾರೆ. ಅವರು ಒಬ್ಬ ಅಪಪ್ರಬುದ್ಧ ರಾಜಕಾರಣಿ. ಮಂಡ್ಯ ಜಿಲ್ಲೆ ಏನು? ಜೆಡಿಎಸ್ ನ ಹಿನ್ನೆಲೆ ಏನು? ಜೆಡಿಎಸ್ ಎಲ್ಲಿಂದ ಹುಟ್ಟಿ ಬಂದಿದೆ? ಎನ್ನುವಷ್ಟು ಯೋಚನೆ ಮಾಡುವಷ್ಟು ಶಕ್ತಿ ಇಲ್ಲದೇ ಇರುವ ಕೂಸು. ಅವರಿಗೆ ಪಾಲಿಟಿಕ್ಸ್ ಗೊತ್ತಿಲ್ಲ ಎಂದು ಸುಮಲತಾ ಅವರ ವಿರುದ್ಧ ವ್ಯಂಗ್ಯವಾಗಿ ಮಾತನಾಡಿದರು.
ಜೆಡಿಎಸ್ ಅನ್ನು ರೈತಾಪಿವರ್ಗ ಕಟ್ಟಿರುವ ಪಕ್ಷ: ಇದೇ ವಿಷಯವಾಗಿ ಮುಂದುವರೆದು ಮಾತನಾಡಿದ ಶ್ರೀ ಕಂಠಯ್ಯ, ಸುಮಲತಾ ಅವರಿಗೆ ಜೆಡಿಎಸ್ ಅನ್ನು ಸಿಗಿದು ಹಾಕಿದೆ, ಜೆಡಿಎಸ್ ಕೋಟೆ ಒಡೆದು ಹೊಯ್ತು ಅಂತಹ ಮಾತುಗಳನ್ನು ಆಡಬೇಡಿ. ಈ ರೀತಿ ಮಾತುಗಳನ್ನು ಆಡಿದಲ್ಲಿ ಮುಂದಿನ ದಿನ ಹಳ್ಳಿಗಳಲ್ಲಿ ಹೋಗುವುದು ಕಷ್ಟ ಆಗುತ್ತದೆ. ಜೆಡಿಎಸ್ ಪಕ್ಷವನ್ನು ಕಟ್ಟಿರುವುದು ಹೊರತು ಎಲ್ಲಿಯೋ ಕುಳಿತಿದ್ದವರನ್ನು ಕರೆದುಕೊಂಡು ಬಂದು ಸೇರಿಸಿಕೊಂಡಿರುವುದಲ್ಲ. ಜೆಡಿಎಸ್ ಅನ್ನು ರೈತಾಪಿವರ್ಗ ಕಟ್ಟಿರುವ ಪಕ್ಷ. ಅದನ್ನು ಒಡೆಯಲು ಸಾಧ್ಯವಿಲ್ಲ. ಅಲ್ಲದೇ, ಇನ್ನೊಂದು ವರ್ಷ ಈ ರೀತಿಯಾಗಿ ಮಾತನಾಡಿದರೇ ಜನರೇ ನಿಮಗೆ ಬುದ್ದಿ ಕಲಿಸುತ್ತಾರೆ ಎಂದು ಸುಮಲತಾ ವಿರುದ್ಧ ಕಟುವಾಗಿ ಮಾತನಾಡಿದರು.
ಇದನ್ನೂ ಓದಿ:'ಅಧಿಕಾರದ ಆಸೆಗೋಸ್ಕರ ಕಾಪಾಡಿದ ಪಕ್ಷಕ್ಕೆ ಮೋಸ ಮಾಡಿದ್ದೀರಿ'
ನನಗೆ ಶಕ್ತಿ ಕೊಟ್ಟು ಜೆಡಿಎಸ್ ಗೆಲ್ಲಿಸಿ - ಶಾಸಕ ರವೀಂದ್ರ ಶ್ರೀಕಂಠಯ್ಯ: ’’ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಏಳಕ್ಕೆ ಏಳು ಕ್ಷೇತ್ರದಲ್ಲಿ ಗೆಲ್ಲುತ್ತದೆ. ಶ್ರೀರಂಗಪಟ್ಟಣ ಜನರು ಬುದ್ದಿವಂತರಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಅನ್ಯಾಯ ಮಾಡಿದವರಿಗೆ ಬುದ್ದಿ ಕಲಿಸುತ್ತಾರೆ. ನಮ್ಮ ಕಾರ್ಯಕರ್ತರು ಕುಮಾರಸ್ವಾಮಿಯ ಕೈ ಬಲ ಪಡಿಸಿದ್ದಾರೆ. ಕಳೆದ ಬಾರಿ ನೀವು ಕೊಟ್ಟ ಶಕ್ತಿಯನ್ನು ಶುಭ್ರವಾಗಿರಿಸಿಕೊಂಡಿದ್ದೇನೆ. ರಾಜ್ಯದಲ್ಲಿ ಶ್ರೀರಂಗಪಟ್ಟಣ ಕ್ಷೇತ್ರ ಪ್ರಬಲ ಇದೆ ಎಂದು ಸಾಬೀತು ಪಡಿಸಿದ್ದೇನೆ. ತಕ್ಕ ಮಟ್ಟಿಗೆ ಕ್ಷೇತ್ರ ಅಭಿವೃದ್ಧಿ ಮಾಡಿದ್ದೇನೆ. ನನಗೆ ಶಕ್ತಿ ಕೊಡಿ ಮೋಸ, ಅನ್ಯಾಯ ಮಾಡಲ್ಲ, ನನಗೆ ಶಕ್ತಿ ಕೊಟ್ಟು ಜೆಡಿಎಸ್ ಗೆಲ್ಲಿಸಿ‘‘ ಎಂದು ಮನವಿ ಮಾಡಿದರು.
ಸುಮಲತಾ ಹೇಳಿರುವುದಾದರು ಏನು?: ಮಾರ್ಚ್ 26 ರಂದು ಮದ್ದೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಸಂಸದೆ ಸುಮಲತಾ ಅವರು, ನಾನು ಚುನಾವಣೆಗೆ ಸ್ಪರ್ಧಿಸಿದ್ದ ಸಮಯದಲ್ಲೇ ಜೆಡಿಎಸ್ನ ಭದ್ರಕೋಟೆ ಒಡೆದು ಹೋಗಿದೆ. ಕೆ ಆರ್ ಪೇಟೆ ಬೈ ಚುನಾವಣೆಯಲ್ಲೂ ಜೆಡಿಎಸ್ನವರು ಸೋತಿದ್ದಾರೆ. ಈಗ ಮತ್ತೆ ಈ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡುವ ಸಮಯ ಬಂದಿದೆ. ಆದರೆ, ನಾವೆಲ್ಲರೂ ಮನಸ್ಸು ಮಾಡಬೇಕೆಂದಿದ್ದರು. ಇದೀಗ ಸಂಸದೆ ಸುಮಲತಾ ಅವರ ಇದೇ ಹೇಳಿಕೆಗೆ ಇಂದು ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಟೀಕಾಸ್ತ್ರ ಪ್ರಯೋಗಿಸಿದ್ದಾರೆ.
ಇದನ್ನೂ ಓದಿ:ರವೀಂದ್ರ ಶ್ರೀಕಂಠಯ್ಯಗೆ ದುರಹಂಕಾರ: ಸುಮಲತಾ ಅಂಬರೀಶ್ ವಾಗ್ದಾಳಿ