ಕರ್ನಾಟಕ

karnataka

ETV Bharat / state

KRS ಡ್ಯಾಂನಲ್ಲಿ ಕ್ರ್ಯಾಕ್ ಬಂದಿದೆ, ಸ್ಥಳೀಯ ರಾಜಕಾರಣದಿಂದ ಪರಿಶೀಲನೆ ಮಾಡುವುದಕ್ಕೂ ಬಿಡುತ್ತಿಲ್ಲ: ಸಂಸದೆ ಸುಮಲತಾ - ಸಂಸದೆ ಸುಮಲತಾ ಅಂಬರೀಶ್

ಜಿಲ್ಲೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಧ್ವನಿ ಎತ್ತಬೇಕು, ಕೆಆರ್​ಎಸ್ ಉಳಿಸಬೇಕು. ಇನ್ವೆಸ್ಟಿಗೇಶನ್ ಮಾಡುವುದನ್ನ ತಡೆದರೇ ರಿಪೋರ್ಟ್ ಹೇಗೆ ಬರುತ್ತದೆ. ಲೋಕಲ್ ರಾಜಕಾರಣದಿಂದ ಪರಿಶೀಲನೆ ಮಾಡುವುದಕ್ಕೆ ಬಿಡುತ್ತಿಲ್ಲ..

mp-sumalatha-talk-
ಸಂಸದೆ ಸುಮಲತಾ

By

Published : May 30, 2021, 8:55 PM IST

Updated : May 30, 2021, 10:21 PM IST

ಮಂಡ್ಯ :ಕೆ‌ಆರ್‌ಎಸ್ ಡ್ಯಾಂನಲ್ಲಿ ಒಂದು ಕ್ರ್ಯಾಕ್ ಬಂದಿದೆ. ಆದರೆ, ಸ್ಥಳೀಯ ರಾಜಕಾರಣದಿಂದ ಪರಿಶೀಲನೆ ಮಾಡುವುದಕ್ಕೆ ಬಿಡುತ್ತಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ‌ನೀಡಿದರು.

ಸಂಸದೆ ಸುಮಲತಾ

ಓದಿ: ಕೊರೊನಾ ಸೋಂಕಿತರಿಗೆ ಜೀವ ರಕ್ಷಕ ವೆಂಟಿಲೇಟರ್ ನಿಜಕ್ಕೂ ಮೃತ್ಯು ಯಂತ್ರವಾಗ್ತಿದ್ಯಾ?:ಏನಾಂತರೇ ತಜ್ಞರು ?

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣರಾಜ ಅಣೆಕಟ್ಟೆಯಲ್ಲಿ ಕ್ರ್ಯಾಕ್ ಯಾವ ಕಾರಣಕ್ಕೆ ಅಂತ ತನಿಖೆ ಮಾಡುವುದಕ್ಕೆ ಬಿಡುತ್ತಿಲ್ಲ. ಸ್ಥಳೀಯ ಲೀಡರ್‌ಗಳು ತಡೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಜಾರ್ಖಂಡ್​​​ನಿಂದ ಅಣೆಕಟ್ಟು ಪರಿಶೀಲನೆ ಮಾಡುವುದಕ್ಕೆ ಬಂದ ತಂಡಕ್ಕೂ ಬಿಡುತ್ತಿಲ್ಲ. ನಾಳೆ ದಿನ ಕೆಆರ್​​ಎಸ್ ಅಣೆಕಟ್ಟೆಗೆ ಹೆಚ್ಚು ಕಡಿಮೆಯಾದರೆ ಆವಾಗ ಏನು ಮಾಡ್ತೀವಿ ನಾವು..? ರಾಜಕಾರಣ ಮಾಡಿಕೊಂಡು ಕೂತರೆ ಎಷ್ಟು ನಷ್ಟ ಆಗಬಹುದು ಅಂತಾ ಯಾರಾದರೂ ಯೋಚನೆ ಮಾಡಿದ್ದಾರಾ..? ಎಂದು ಪ್ರಶ್ನೆ ಮಾಡಿದರು.

ಜಿಲ್ಲೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಧ್ವನಿ ಎತ್ತಬೇಕು, ಕೆಆರ್​ಎಸ್ ಉಳಿಸಬೇಕು. ಇನ್ವೆಸ್ಟಿಗೇಶನ್ ಮಾಡುವುದನ್ನ ತಡೆದರೇ ರಿಪೋರ್ಟ್ ಹೇಗೆ ಬರುತ್ತದೆ. ಲೋಕಲ್ ರಾಜಕಾರಣದಿಂದ ಪರಿಶೀಲನೆ ಮಾಡುವುದಕ್ಕೆ ಬಿಡುತ್ತಿಲ್ಲ.

ತಮ್ಮ ಕೆಲಸಕ್ಕಾಗಿ ಯಾವ ಪಕ್ಷದ ಜೊತೆ ಬೇಕಾದರೂ ಕೈಜೋಡಿಸ್ತಿರಾ.. ಆದರೆ, ನಮ್ಮ ಜನ ಯಾಕೆ ಬಲಿಯಾಗಬೇಕು ಎಂದು ದಳಪತಿಗಳ ಮೇಲೆ ಕಿಡಿಕಾರಿದರು.

Last Updated : May 30, 2021, 10:21 PM IST

ABOUT THE AUTHOR

...view details