ಮಂಡ್ಯ:ಜಿಲ್ಲೆಯಲ್ಲಿ ಅಭಿವೃದ್ಧಿ ವಿಚಾರಗಳಿಂದ ಹೆಚ್ಚಾಗಿ ಸಂಸದೆ ಸುಮಲತಾ ಹಾಗೂ ಜೆಡಿಎಸ್ ನಾಯಕರುಗಳ ನಡುವೆ ಮಾತಿನ ಯುದ್ಧ ಜೋರಾಗಿತ್ತು. ಇದೀಗ ಮತ್ತೆ ಜೆಡಿಎಸ್ ಶಾಸಕರ ವಿರುದ್ಧ ಸಂಸದೆ ಸುಮಲತಾ ಅವರು ವಾಗ್ದಾಳಿ ನಡೆಸಿದ್ದಾರೆ.
ಸಂಸದೆ ಸುಮಲತಾ ಅವರು ಮಾತನಾಡಿದರು ಅಧಿವೇಶನ ವೇಳೆ ದಿಶಾ ಸಭೆ ನಿಗದಿ ವಿಚಾರವಾಗಿ ಮಾತನಾಡಿದ ಅವರು, 3 ವರ್ಷಗಳಲ್ಲಿ ನಡೆದ ದಿಶಾ ಸಭೆಗೆ ಎಷ್ಟು ಬಾರಿ ಶಾಸಕರು ಹಾಜರಾಗಿದ್ದಾರೆ. 2 ವರ್ಷಗಳಲ್ಲಿ ಒಂದೇ ಒಂದು ಸಭೆಗೆ ಜೆಡಿಎಸ್ ಶಾಸಕರು ಬಂದಿಲ್ಲ. ಅಕ್ರಮ ಗಣಿಗಾರಿಕೆ ವಿರುದ್ಧ ನಾನು ನಿಂತಾಗ ಎಲ್ಲರೂ ಸಭೆಗೆ ಹಾಜರಾಗಿದ್ದರು.
ಕೆಲವೊಮ್ಮೆ ಅಧಿವೇಶನ ಸಂದರ್ಭದಲ್ಲೂ ಸಭೆ ನಡೆಸಬೇಕಾಗುತ್ತದೆ. ಈಗ ಹೆಚ್ಚು ಮಳೆಯಾಗಿ ರಸ್ತೆ, ಮನೆ, ಬೆಳೆ ಹಾನಿಯಾಗಿದೆ. ಹಾಗಾಗಿ ತುರ್ತು ಸಭೆ ನಡೆಸಿ ಜನರಿಗೆ ಪರಿಹಾರ ಕೊಡಿಸುವ ಕೆಲಸ ಮಾಡಬೇಕು. ಅದು ಬಿಟ್ಟು ರಾಜಕಾರಣ ಮಾಡೋದಕ್ಕೆ ಆಗುತ್ತಾ.? ಎಂದು ಪ್ರಶ್ನಿಸಿದರು.
ಜೆಡಿಎಸ್ ಶಾಸಕರಿಗೆ ಕಾಳಜಿ ಇಲ್ಲ:ನಮಗೂ ಅಧಿವೇಶನ ಇದ್ದಾಗ ನೋಟಿಸ್ ನೀಡದೇ ಶಾಸಕರು ಕೆಡಿಪಿ ಸಭೆ ಮಾಡ್ತಾರೆ. ಅಧಿವೇಶನದಲ್ಲಿ ಜಿಲ್ಲೆಯ ಸಮಸ್ಯೆ ಬಗ್ಗೆ ಯಾವ ಶಾಸಕರು ಮಾತನಾಡಿದ್ದಾರೆ. ನಾನು ಸಂಸತ್‌ನಲ್ಲಿ ಸಮಸ್ಯೆಗಳ ಬಗ್ಗೆ ಮಾತನಾಡಿದ್ದೇನೆ. ಶಾಸಕರು ಮಾತನಾಡಿರುವ ಬಗ್ಗೆ ರೆಕಾರ್ಡ್ ತೆಗೆದು ನೋಡಿ. ಜೆಡಿಎಸ್ ಶಾಸಕರಿಗೆ ಕಾಳಜಿ ಇಲ್ಲ, ಅವರದ್ದು, ಬರೀ ರಾಜಕಾರಣ. ಬೇರೆಯವರ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಬಿಟ್ಟರೇ ಇವರ ಸಾಧನೆ ಏನು? ಎಂದು ಪ್ರಶ್ನಿಸಿದರು.
ಶಾಸಕರಿಗೆ ಸಭೆಗೆ ಬರಲು ಆಸಕ್ತಿ ಇಲ್ಲ: ದಬ್ಬಾಳಿಕೆ, ಗುಂಡಾಗಿರಿ, ದುರಹಂಕಾರ ಬಿಟ್ಟರೆ ಇವರು ಜನಸಾಮಾನ್ಯರ ಪರ ಮಾತನಾಡಲ್ಲ. ಅವರನ್ನು ಜನ ಆಯ್ಕೆ ಮಾಡಿರುವುದು ಕೇವಲ ಸುಮಲತಾ ಟಾರ್ಗೆಟ್ ಮಾಡೋಕಾ. 3 ವರ್ಷಗಳಿಂದ ಸಭೆಗೆ ಬರದ ಆಸಕ್ತಿ ಈಗ ಏಕೆ?. ಅಕ್ರಮ ಗಣಿಗಾರಿಕೆ ವಿಚಾರವಾಗಿ ಸಭೆ ಬಂದಿದ್ದರು ಬಿಟ್ಟರೆ ಇನ್ಯಾವ ಸಭೆಗೂ ಬಂದಿಲ್ಲ. ಸಭೆಗೆ ಬಂದು ಗಂಭೀರ ಸಮಸ್ಯೆಗಳ ಬಗ್ಗೆ ಅವರು ಮಾತನಾಡಲ್ಲ. ಕೂಗಾಡಿ, ಕಿರುಚಾಡಿ ಸಭೆಯಲ್ಲಿ ಡ್ರಾಮ ಮಾಡೋದಷ್ಟೇ ಅವರಿಗೆ ಗೊತ್ತಿದೆ. ನಿಯಮಾನುಸಾರವೇ ನಾನು ಸಭೆ ಕರೆದಿದ್ದೇನೆ. ಜೆಡಿಎಸ್ ಶಾಸಕರಿಗೆ ಸಭೆಗೆ ಬರಲು ಆಸಕ್ತಿ ಇಲ್ಲ ಎಂದರು.
ಓದಿ:ಆಣೆ ಪ್ರಮಾಣಕ್ಕೆ ಬಂದು ನಿಂತ ಸುಮಲತಾ ಹಾಗೂ ಜೆಡಿಎಸ್ ನಾಯಕರ ಮಾತಿನ ಯುದ್ಧ