ಕರ್ನಾಟಕ

karnataka

ETV Bharat / state

ಬ್ಯಾಂಕ್ ಅಧಿಕಾರಿಗಳ ಜೊತೆ ಸಂಸದೆ ಸುಮಲತಾ ಸಭೆ: ರೈತರಿಗೆ ನೀಡಿದ ಸಾಲದ ಬಗ್ಗೆ ಮಾಹಿತಿ ಸಂಗ್ರಹ - MP Sumalatha

ಬರೋಡಾ ಬ್ಯಾಂಕ್ ಸ್ವ ಉದ್ಯೋಗ ಕೇಂದ್ರದಲ್ಲಿ ಬ್ಯಾಂಕ್ ಅಧಿಕಾರಿಗಳ ಜೊತೆ ಸಂಸದೆ ಸುಮಲತಾ ಅಂಬರೀಶ್ ಸಭೆ ನಡೆಸಿದ್ರು. ರೈತರಿಗೆ ಸಮಸ್ಯೆ ಆಗದ ರೀತಿಯಲ್ಲಿ ಸಾಲ ನೀಡಬೇಕು, ಕಿರುಕುಳ ನೀಡಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಬ್ಯಾಂಕ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಂಸದೆ ಸುಮಲತಾ
ಬ್ಯಾಂಕ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಂಸದೆ ಸುಮಲತಾ

By

Published : Jun 17, 2020, 2:46 PM IST

ಮಂಡ್ಯ: ಮುಂಗಾರು ಮಳೆ ಆರಂಭವಾದ ಹಿನ್ನೆಲೆ ರೈತರಿಗೆ ನೀಡಬೇಕಾದ ಸಾಲದ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಂದ ಸಂಸದೆ ಸುಮಲತಾ ಅಂಬರೀಶ್ ಮಾಹಿತಿ ಪಡೆದುಕೊಂಡರು.

ಬ್ಯಾಂಕ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಂಸದೆ ಸುಮಲತಾ

ಬರೋಡಾ ಬ್ಯಾಂಕ್ ಸ್ವ ಉದ್ಯೋಗ ಕೇಂದ್ರದಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ಮಾಡಿ, ಸಾಲ ನೀಡುವ ಕುರಿತು ಮಾಹಿತಿ ಹಂಚಿಕೊಂಡರು. ಜಿಲ್ಲಾ ಮಟ್ಟದ ಎಲ್ಲಾ ಬ್ಯಾಂಕ್ ಅಧಿಕಾರಿಗಳ ಸಭೆ ಮಾಡಿದ ಸಂಸದೆ ರೈತರಿಗೆ ಬೇಕಾಗಿರುವ ಕೃಷಿ ಸಾಲ ಹಾಗೂ ರಸಗೊಬ್ಬರ ಸಾಲ ಕುರಿತು ಸೂಚನೆ ನೀಡಿದರು.

ರೈತರಿಗೆ ಸಮಸ್ಯೆ ಆಗದ ರೀತಿಯಲ್ಲಿ ಸಾಲ ನೀಡಬೇಕು, ಕಿರುಕುಳ ನೀಡಬಾರದು ಎಂದು ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿ ವೆಂಕಟೇಶ್, ಕೃಷಿ ಸಾಲದ ಅವಶ್ಯಕತೆ ಕುರಿತು ಬ್ಯಾಂಕ್ ಅಧಿಕಾರಿಗಳಿಗೆ ಸಲಹೆ ನೀಡಿದರು. ಜೊತೆಗೆ ಸರ್ಕಾರ ನಿಗಧಿ ಮಾಡಿರುವಷ್ಟು ಸಾಲ ವಿತರಣೆ ಆಗಬೇಕು ಎಂದರು.

ABOUT THE AUTHOR

...view details