ಕರ್ನಾಟಕ

karnataka

ETV Bharat / state

ಮಂಡ್ಯ ಸಂಸದೆ ಇಂಡಿಯಾಗೇ ಮಾದರಿ.. ದಾಖಲೆ ಬರೆದ ಹುಚ್ಚೇಗೌಡರ ಸೊಸೆ ಸುಮಲತಾ ಅಂಬಿ.. - ದಾಖಲೆ ನಿರ್ಮಿಸಿದ ಸಂಸದೆ ಸುಮಲತಾ ಅಂಬರೀಶ್​

ಸುಮಲತಾ ಸಭೆ ನಡೆಸಿರುವ ಕುರಿತು ಭಾರತ ಸರ್ಕಾರದ ವೆಬ್​ಸೈಟ್​ನಲ್ಲಿ ದಾಖಲು ಮಾಡಿದ್ದಾರೆ. ನಾಲ್ಕು ಸಭೆ ನಡೆಸಿ ರಾಜ್ಯ ಮಾತ್ರವಲ್ಲದೇ ದೇಶದಲ್ಲೇ ಗಮನ ಸೆಳೆದಿದ್ದಾರೆ..

mp sumalatha held  progress review meeting 4 times in a year
ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ

By

Published : Jan 20, 2021, 4:47 PM IST

ಮಂಡ್ಯ: ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಡ್ಯ ಸಂಸದೆ ಸುಮಲತಾ ನಂ.1 ಸ್ಥಾನದಲ್ಲಿದ್ದಾರೆ. ವರ್ಷದಲ್ಲಿ ನಾಲ್ಕು ತ್ರೈಮಾಸಿಕ ಸಭೆ ನಡೆಸಿದ ರಾಜ್ಯದ ಏಕೈಕ ಸಂಸದೆ ಎಂದು ಹೆಸರುಗಳಿಸಿಕೊಂಡಿದ್ದಾರೆ.

2020-21ನೇ ಸಾಲಿನಲ್ಲಿ 4 ಸಭೆ ನಡೆಸಿ ನಂಬರ್ 1 ಪಟ್ಟ ಪಡೆದ ರೆಬೆಲ್ ಲೇಡಿಯಾಗಿರುವ ಸಂಸದೆ ಸುಮಲತಾ ಅವರು, 3 ತಿಂಗಳಿಗೊಮ್ಮೆ ನಡೆಸಬೇಕಿರುವ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ.

ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ

ಕೊರೊನಾ ಭೀತಿಯಿದ್ದಾಗಲೂ ಸಭೆ ನಡೆಸಿ ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿಗೆ ಚುರುಕು ನೀಡಿದ್ದ ಸುಮಲತಾ ಅವರು, ರಾಜ್ಯದ ಕೆಲವು ಸಂಸದರು ಒಂದು, ಎರಡು ಸಭೆ ಮಾತ್ರ ನಡೆಸಿದ ರೀತಿ ನಿರ್ಲಕ್ಷ್ಯ ಮಾಡದೇ 4 ಸಭೆಗಳನ್ನು ನಡೆಸಿ ಗ್ರೇಟ್​ ಎನಿಸಿಕೊಂಡಿದ್ದಾರೆ.

ಸುಮಲತಾ ಸಭೆ ನಡೆಸಿರುವ ಕುರಿತು ಭಾರತ ಸರ್ಕಾರದ ವೆಬ್​ಸೈಟ್​ನಲ್ಲಿ ದಾಖಲು ಮಾಡಿದ್ದಾರೆ. ನಾಲ್ಕು ಸಭೆ ನಡೆಸಿ ರಾಜ್ಯ ಮಾತ್ರವಲ್ಲದೇ ದೇಶದಲ್ಲೇ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ :ಇವ ಪ್ರೀತಿಗೆ 'ಯಜಮಾನ'.. ಶಿವರಾಜ್​​​​​ ಕೆ.ಆರ್​ ಪೇಟೆ ಪುತ್ರನ ಬರ್ತ್‌ಡೇಗೆ ದಚ್ಚು ಕೊಟ್ರು ಸ್ಪೆಷಲ್​​​ ಗಿಫ್ಟ್!!

ABOUT THE AUTHOR

...view details