ಕರ್ನಾಟಕ

karnataka

ETV Bharat / state

ರಾಮಮಂದಿರ ನಿರ್ಮಾಣಕ್ಕೆ ಐದು ಸಾವಿರ ದೇಣಿಗೆ ನೀಡಿದ ಸಂಸದೆ... - ರಾಮಮಂದಿರ ನಿರ್ಮಾಣ

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮಮಂದಿರ ನಿರ್ಮಾಣಕ್ಕೆ ಸಂಸದೆ ಸುಮಲತಾ ಅಂಬರೀಶ್​ ಐದು ಸಾವಿರ ರೂ. ದೇಣಿಗೆ ನೀಡಿದ್ದಾರೆ.

Sumalatha ambarish
ಸುಮಲತಾ ಅಂಬರೀಶ್

By

Published : Jan 15, 2021, 5:24 PM IST

ಮಂಡ್ಯ:ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಸದೆ ಸುಮಲತಾ ಅಂಬರೀಶ್ ಐದು ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ. ನಗರದ ಕಮಲ ಮಂದಿರದಲ್ಲಿ ಆರ್.ಎಸ್.ಎಸ್ ಪ್ರಚಾರಕರ ಕೈಗೆ ಸಂಸದೆ ಸುಮಲತಾ ದೇಣಿಗೆ ಹಸ್ತಾಂತರಿಸಿದರು.

ರಾಮಮಂದಿರ ನಿರ್ಮಾಣಕ್ಕೆ ದೇಣಿದೆ ನೀಡಿದ ಸಂಸದೆ ಸುಮಲತಾ ಅಂಬರೀಶ್​

ದೇಣಿಗೆ ನೀಡಿದ್ದರ ಹಿಂದಿನ ಉದ್ದೇಶ ರಾಜಕೀಯವಲ್ಲ. ಇದು ನನಗೆ ಮಂದಿರ ನಿರ್ಮಾಣದ ಸಂತೋಷ ಎಂದ ಅವರು, ಅವಕಾಶ ಸಿಕ್ಕಾಗ ಅಯೋಧ್ಯೆಗೆ ಹೋಗುವೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ನಮ್ಮೆಲ್ಲರ ಹೆಮ್ಮೆ ಎಂದರಲ್ಲದೇ ಪುಣ್ಯಕಾರ್ಯದಲ್ಲಿ ನಾವೆಲ್ಲಾ ಭಾಗಿಯಾಗೋಣ ಎಂದು ತಿಳಿಸಿದರು.

ಓದಿ...ರಾಮಮಂದಿರ ನಿರ್ಮಾಣಕ್ಕೆ 1ಲಕ್ಷ ರೂಪಾಯಿ ದೇಣಿಗೆ ನೀಡಿದ ಮುಸ್ಲಿಂ ಕುಟುಂಬ

ಜ.15 ರಿಂದ ಫೆ.5 ರ ವರೆಗೆ ನಿಧಿ ಸಮರ್ಪಣಾ ಅಭಿಯಾನ ನಡೆಯುತ್ತಿದೆ. ನಾನು ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣೆ ಮಾಡ್ತಾ ಇದ್ದೇನೆ. ನೀವೂ ಮಾಡಿ ನಾವೆಲ್ಲ ಸೇರಿ ಒಟ್ಟಾಗಿ‌ ರಾಮಮಂದಿರ ಕಟ್ಟೋಣಾ ಎಂದು ಸಂಸದೆ ಸುಮಲತಾ ಅಂಬರೀಶ್ ಮನವಿ ಮಾಡಿದರು.

ABOUT THE AUTHOR

...view details