ಕರ್ನಾಟಕ

karnataka

ETV Bharat / state

ಮಂಡ್ಯ ಕಬ್ಬು ಬೆಳೆಗಾರರ ಸಮಸ್ಯೆ ಉಲ್ಬಣ.. ಸಂಸದೆ ಸುಮಲತಾ ಅಂಬಿ ಪರಿಹಾರ ಸೂತ್ರ? - ಬಾಕಿ ಹಣ ಪಾವತಿ

ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ರಾಜ್ಯ ಸರ್ಕಾರ ಸಂವಾದ ಮಾಡಿ ಆಗಿದೆ. ಜೆಡಿಎಸ್ ನಾಯಕರು ಪ್ರತಿಭಟನೆ ಮಾಡಿ ಎಚ್ಚರಿಕೆ ನೀಡಿಯೂ ಆಯ್ತು. ಈಗ ಸಂಸದೆ ಸುಮಲತಾ ಸರದಿ ಬಂದಿದ್ದು. ಇಂದು ಸಂಸದರು ಕಾರ್ಖಾನೆಗಳ ಆಡಳಿತ ಮಂಡಳಿ ಸದಸ್ಯರ ಸಭೆ ಮಾಡಿ ಕಬ್ಬು ನುರಿಯುವುದರಲ್ಲಿ ರಾಜಕೀಯ ಬೇಡ, ಸಾಧ್ಯವಾದಷ್ಟು ಸಾಮಾರ್ಥ್ಯಕ್ಕೆ ಅನುಗುಣವಾಗಿ ರೈತರ ರಕ್ಷಣೆಗೆ ಮುಂದಾಗುವಂತೆ ಸಲಹೆ ನೀಡಿದ್ದಾರೆ.

ಸಂಸದೆ ಸುಮಲತಾ

By

Published : Oct 9, 2019, 8:48 PM IST

ಮಂಡ್ಯ: ಕಬ್ಬು ಬೆಳೆಗಾರರ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ರಾಜ್ಯ ಸರ್ಕಾರ ಸಂವಾದ ಮಾಡಿ ಆಗಿದೆ. ಜೆಡಿಎಸ್ ನಾಯಕರು ಪ್ರತಿಭಟನೆ ಮಾಡಿ ಎಚ್ಚರಿಕೆ ನೀಡಿಯೂ ಆಯ್ತು. ಈಗ ಸಂಸದೆ ಸುಮಲತಾ ಸರದಿ ಬಂದಿದ್ದು. ಇಂದು ಸಂಸದರು ಕಾರ್ಖಾನೆಗಳ ಆಡಳಿತ ಮಂಡಳಿ ಸದಸ್ಯರ ಸಭೆ ಮಾಡಿ ಕಬ್ಬು ನುರಿಯುವುದರಲ್ಲಿ ರಾಜಕೀಯ ಬೇಡ, ಸಾಧ್ಯವಾದಷ್ಟು ಸಾಮಾರ್ಥ್ಯಕ್ಕೆ ಅನುಗುಣವಾಗಿ ರೈತರ ರಕ್ಷಣೆಗೆ ಮುಂದಾಗುವಂತೆ ಸಲಹೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಮಾಡಿ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಸಮಸ್ಯೆ ನಿನ್ನೆ ಮೊನ್ನೆಯಿಂದ ಬಂದಿರುವಂತದ್ದಲ್ಲ. ಇದು ಹಲವಾರು ವರ್ಷಗಳಿಂದ ರಾಜಕೀಯ ನಾಯಕರು ಮಾಡಿರುವ ಕಳಪೆ ಕೆಲಸ ಎಂದರು. ಅಲ್ಲದೇ ಜಿಲ್ಲಾ ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಕಂಪನಿ ಮಾಲೀಕರ ಸಮಸ್ಯೆ ಕುರಿತು ಚರ್ಚಿಸಿದ್ದು. ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಜೊತೆ ಸಭೆ ಮಾಡಿ ರೈತರ ರಕ್ಷಣೆಗೆ ಮುಂದಾಗುವಂತೆ ಸಲಹೆ ನೀಡಿದರು‌.

ಸಂಸದೆ ಸುಮಲತಾ ಅಂಬರೀಶ್‌..

ಮಾಧ್ಯಮದ ಮುಂದೆ ಭಾಷಣ ಮಾಡಬೇಡಿ :

ರೈತರ ಮೇಲೆ ನಿಜವಾಗಿಯೂ ಅನುಕಂಪ ಇರುವವರು ಅವರ ಬಳಿಗೆ ಹೋಗಿ ಸಮಸ್ಯೆಯನ್ನು ಕೇಳಿ, ಅದನ್ನು ಬಿಟ್ಟು ಕೇವಲ ಪ್ರಚಾರಕ್ಕೆ ಮಾಧ್ಯಮದ ಮುಂದೆ ಭಾಷಣ ಮಾಡಬೇಡಿ ಎಂದರು.ಕಬ್ಬು ಸಾಗಣೆ ವೆಚ್ಚದ ವಿಚಾರವಾಗಿ ಸರ್ಕಾರಕ್ಕೆ ಮನವಿ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ರೈತರಿಗೆ ಬಾಕಿ ಹಣ ನೀಡಲು ಎಲ್ಲಾ ಕಾರ್ಖಾನೆಗಳ ಆಡಳಿತ ಮಂಡಳಿಗೆ ಮನವಿ ಮಾಡಿದರು.

ರೈತರ ಕಬ್ಬಿನ ಬಾಕಿ ಹಣ ಪಾವತಿ ಮಾಡಬೇಕು. ಸಮಸ್ಯೆ ಹೊತ್ತು ರೈತರು ನಮ್ಮ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗಳಿಗೆ ಬಾರದಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದರು. ಕಬ್ಬು ಕೊಂಡುಕೊಳ್ಳುವ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬೇಡಿ ಎಂದು ತಿಳಿಸಿದರು. ಇನ್ನು, ಪಿಎಸ್ಎಸ್‌ಕೆ ಕಾರ್ಖಾನೆ ಪ್ರಾರಂಭಕ್ಕೆ ಎದುರಾಗಿರುವ ತಾಂತ್ರಿಕ ಸಮಸ್ಯೆ ನಿವಾರಣೆಗೆ ಕ್ರಮವಹಿಸಿ, ಕೆಟ್ಟು ಹೋಗಿರೋ ಯಂತ್ರದ ಬಿಡಿಭಾಗ ತರಿಸಲು ತುರ್ತು ಕ್ರಮ ವಹಿಸುವಂತೆ ಸೂಚಿಸಿದ್ದಾರೆ.

ABOUT THE AUTHOR

...view details