ಕರ್ನಾಟಕ

karnataka

ETV Bharat / state

ಕೋವಿಡ್​ನಿಂದ ಗುಣಮುಖ: ಕೆಆರ್‌ಎಸ್‌ಗೆ ಭೇಟಿ ನೀಡಿದ ಸಂಸದೆ ಸುಮಲತಾ ಅಂಬರೀಶ್ - Sumalatha Ambarish visits KRS

ಕೋವಿಡ್ 19ನಿಂದ ಗುಣಮುಖರಾದ ನಂತರ ಸಂಸದೆ ಸುಮಲತಾ ಅಂಬರೀಶ್ ಮೊದಲ ಬಾರಿಗೆ ಕ್ಷೇತ್ರದ ಪ್ರವಾಸದಲ್ಲಿದ್ದು, ಇಂದು ಅಣೆಕಟ್ಟೆ ವೀಕ್ಷಣೆ ಮಾಡಿದರು.

MP Sumalatha Ambarish  visites  KRS
ಕೆಆರ್‌ಎಸ್‌ಗೆ ಭೇಟಿ ನೀಡಿದ ಸಂಸದೆ ಸುಮಲತಾ ಅಂಬರೀಶ್

By

Published : Aug 12, 2020, 2:26 PM IST

Updated : Aug 12, 2020, 3:05 PM IST

ಮಂಡ್ಯ: ತುಂಬುತ್ತಿರುವ ಕೆಆರ್‌ಎಸ್ ಅಣೆಕಟ್ಟೆಯನ್ನು ಸಂಸದೆ ಸುಮಲತಾ ಅಂಬರೀಶ್ ವೀಕ್ಷಣೆ ಮಾಡಿದರು. ಕೋವಿಡ್ 19ನಿಂದ ಗುಣಮುಖರಾದ ನಂತರ ಮೊದಲ ಕ್ಷೇತ್ರದ ಪ್ರವಾಸದಲ್ಲಿದ್ದು, ಅಣೆಕಟ್ಟೆ ವೀಕ್ಷಣೆ ಮಾಡಿದರು.

ಕೆಆರ್‌ಎಸ್‌ಗೆ ಭೇಟಿ ನೀಡಿದ ಸಂಸದೆ ಸುಮಲತಾ ಅಂಬರೀಶ್

ಬೆಳಗ್ಗೆ ಮೈಸೂರಿನಿಂದ ಆಗಮಿಸಿದ ಸಂಸದೆ, ಅಧಿಕಾರಿಗಳಿಂದ ನೀರಿನ ಒಳ ಹರಿವು ಹಾಗೂ ಹೊರ ಹರಿವಿನ ಮಾಹಿತಿ ಪಡೆದುಕೊಂಡರು. ಕೃಷಿಗೆ ಅವಶ್ಯಕತೆಗನುಗುಣವಾಗಿ ನೀರಿನ ಪ್ರಮಾಣ, ಕುಡಿಯುವ ನೀರು ಹಾಗೂ ಇನ್ನಿತರೆ ಉಪಯೋಗ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ನಂತರ ಮಾತನಾಡಿದ ಅವರು, ಅಣೆಕಟ್ಟೆ ಹಿತದೃಷ್ಟಿಯಿಂದ ಕಲ್ಲು ಗಣಿಗಾರಿಕೆ ನಿಲ್ಲಿಸುವುದು ಅವಶ್ಯಕವಾಗಿದೆ. ಗಣಿಗಾರಿಕೆಗೆ ನನ್ನ ವಿರೋಧವಿದೆ. ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬಿಡಬೇಕು. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಬೇಕಾಗಿದೆ ಎಂದರು.

Last Updated : Aug 12, 2020, 3:05 PM IST

ABOUT THE AUTHOR

...view details