ಮಂಡ್ಯ: ಕೆ.ಆರ್.ಎಸ್ ಅಣೆಕಟ್ಟೆ ಬಿರುಕು ಬಿಟ್ಟಿಲ್ಲ ಎಂದರೆ ಸಂತೋಷ. ಆದ್ರೆ ಸತ್ಯಾಸತ್ಯತೆ ಅರಿಯಲು ಅವಕಾಶ ಮಾಡಿಕೊಡಬೇಕು ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ಯಾಂನಲ್ಲಿ ಬಿರುಕು ಇದೆಯೋ, ಇಲ್ವೋ ಎಂಬುದೇ ಪ್ರಶ್ನೆಯಾಗಿದೆ. ಆದರೆ ಹಿಂದೆ ಏನೆಲ್ಲಾ ಆಗಿದೆ ಎಂಬ ದಾಖಲೆ ಇದೆ. ನೂರು ವರ್ಷದ ಹಿಂದಿನ ಡ್ಯಾಂ ಬಲಪಡಿಸಲು ನೋಡಬೇಕು. ಡ್ಯಾಂ ಹತ್ತಿರ ಬಂದು ಅಕ್ರಮ ಗಣಿಗಾರಿಕೆ ಮಾಡಿದ್ರೆ ಹೇಗೆ?. ಡ್ಯಾಂ ಬಗ್ಗೆ ಪ್ರತಿದಿನ ಮಾಹಿತಿ ಪಡೆಯುತ್ತಿರುವುದಲ್ಲದೇ, ಹಲವು ಅಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ಪಡೆಯುತ್ತಿದ್ದೇನೆ ಎಂದರು.