ಮಂಡ್ಯ :ಮೈಶುಗರ್ ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಲು ರೈತ ಹಿತರಕ್ಷಣಾ ಸಮಿತಿ ಹೋರಾಟಕ್ಕೆ ಹೊಸ ರೂಪ ನೀಡಿದೆ. ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡರ ವಿಡಿಯೋ ಕಾನ್ಫರೆನ್ಸ್ ಸಂದರ್ಶನದ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಮೈಶುಗರ್ ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಲು ಚಳವಳಿ.. ಆನ್‌ಲೈನ್ ಮೂಲಕ ನಿ. ನ್ಯಾಯಮೂರ್ತಿಗಳ ಪಾಠ!! - mandya mysugar news
ಸಮಿತಿ ಅಧ್ಯಕ್ಷ ಜಿ. ಮಾದೇಗೌಡ, ಮುಖಂಡರಾದ ಸುನಂದಾ ಜಯರಾಂ, ಎಂ ಬಿ ಶ್ರೀನಿವಾಸ್, ಕುಮಾರಿ ಸೇರಿ ಹಲವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಳವಳಿಗೆ ಹೊಸ ದಿಕ್ಕು ನೀಡಿದ್ದಾರೆ. ಮೈಶುಗರ್ ಖಾಸಗೀಕರಣ ಬೇಡ ಎಂಬುದೇ ಸಮಿತಿಯ ಹೋರಾಟವಾಗಿದೆ..
ಮೈಶುಗರ್ ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಲು ಚಳವಳಿ
ನಗರದ ಪ್ರೆಸ್ ಕ್ಲಬ್‌ನಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ನಲ್ಲಿ ಮೂಲಕ ನಿವೃತ್ತ ನ್ಯಾ. ಗೋಪಾಲಗೌಡರು ಮಾಹಿತಿ ಪ್ರಸ್ತುತ ಪಡಿಸಿದರು. ಮೈಶುಗರ್ ಒ ಅಂಡ್ ಎಂ ಮಾಡಿದರೆ ಆಗುವ ಅನಾನೂಕೂಲ, ಖಾಸಗೀಕರಣದ ಅನವಶ್ಯಕತೆ, ಸರ್ಕಾರಿ ಸ್ವಾಮ್ಯದಲ್ಲೇ ಕಂಪನಿ ನಡೆದರೆ ಆಗುವ ಉಪಯೋಗ ಕುರಿತು ಮಾಹಿತಿ ನೀಡಿದರು.
ಸಮಿತಿ ಅಧ್ಯಕ್ಷ ಜಿ. ಮಾದೇಗೌಡ, ಮುಖಂಡರಾದ ಸುನಂದಾ ಜಯರಾಂ, ಎಂ ಬಿ ಶ್ರೀನಿವಾಸ್, ಕುಮಾರಿ ಸೇರಿ ಹಲವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಳವಳಿಗೆ ಹೊಸ ದಿಕ್ಕು ನೀಡಿದ್ದಾರೆ. ಮೈಶುಗರ್ ಖಾಸಗೀಕರಣ ಬೇಡ ಎಂಬುದೇ ಸಮಿತಿಯ ಹೋರಾಟವಾಗಿದೆ.