ಕರ್ನಾಟಕ

karnataka

ETV Bharat / state

ದೀಪಾವಳಿ ಹಬ್ಬದಂದು ಮೇಲುಕೋಟೆಯಲ್ಲಿ ಶೋಕಾಚರಣೆ..!

ಟಿಪ್ಪುವಿನ ಆಡಳಿತದ ಅವಧಿಯಲ್ಲಿ ಮೇಲುಕೋಟೆಯಲ್ಲಿ ನಡೆದ ಮಂಡ್ಯ ಅಯ್ಯಂಗಾರರ ಹತ್ಯೆ ಖಂಡಿಸಿ ಮಂಡ್ಯದ ಮೇಲುಕೋಟೆಯಲ್ಲಿ ಶೋಕಾಚರಣೆ ಆಚರಿಸಲಾಯಿತು.

ಮೇಲುಕೋಟೆಯಲ್ಲಿ ಶೋಕಾಚರಣೆ
ಮೇಲುಕೋಟೆಯಲ್ಲಿ ಶೋಕಾಚರಣೆ

By

Published : Oct 25, 2022, 11:30 AM IST

Updated : Oct 25, 2022, 2:00 PM IST

ಮಂಡ್ಯ:ವಿಶ್ವದೆಲ್ಲೆಡೆ ದೀಪಾವಳಿ ಹಬ್ಬ ಆಚರಿಸಲಾಗುತ್ತಿದ್ದರೆ, ಮೇಲುಕೋಟೆಯಲ್ಲಿ ಮಾತ್ರ ನಿಶಬ್ಧ ಮೌನ ಆವರಿಸಿದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಶೋಕಾಚರಣೆ ಆಚರಿಸಲಾಗುತ್ತಿದೆ.

ಟಿಪ್ಪುವಿನ ಆಡಳಿತದ ಅವಧಿಯಲ್ಲಿ ಮೇಲುಕೋಟೆಯಲ್ಲಿ ನಡೆದ ಮಂಡ್ಯ ಅಯ್ಯಂಗಾರರ ಹತ್ಯೆ ಖಂಡಿಸಿ ಶೋಕಾಚರಣೆ ಮತ್ತು ಪಂಜಿನ ಮೆರವಣಿಗೆ ನಡೆಸಲಾಯಿತು. ಮೃತ ಅಯ್ಯಂಗಾರರ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಹಿನ್ನೆಲೆ ಶೋಕಾಚರಣೆ ಮಾಡಲಾಯಿತು.

ದೀಪಾವಳಿ ಹಬ್ಬದಂದು ಮೇಲುಕೋಟೆಯಲ್ಲಿ ಶೋಕಾಚರಣೆ

ಪಂಜಿನ ಮೆರವಣಿಗೆ ನಡೆಸುವ ಮೂಲಕ ಟಿಪ್ಪು ಕೃತ್ಯವನ್ನು ಹಿಂದೂ ಕಾರ್ಯಕರ್ತರು ಖಂಡಿಸಿದರು. ಕಳೆದ 2 ವರ್ಷಗಳಿಂದ ಮೇಲುಕೋಟೆ ಹತ್ಯಾಕಾಂಡ ಶೋಕಾಚರಣೆ ಸಮಿತಿ ವತಿಯಿಂದ ಕರಾಳ ದಿನಾಚರಣೆ ಆಚರಿಸಲಾಗುತ್ತಿದೆ. ಬಿಜೆಪಿ ಮುಖಂಡ ಡಾ‌. ಇಂದ್ರೇಶ್ ನೇತೃತ್ವದಲ್ಲಿ ಶೋಕಾಚರಣೆ ನಡೆಸಲಾಯಿತು. ಟಿಪ್ಪು ವಿರುದ್ಧ ಧಿಕ್ಕಾರ ಕೂಗಿ ಹಿಂದೂ ಕಾರ್ಯಕರ್ತರು ಈ ಕೃತ್ಯವನ್ನು ಖಂಡಿಸಿದರು.

ಇದನ್ನೂ ಓದಿ:ಕೆಲವರು ಚೀಪ್ ಪಬ್ಲಿಸಿಟಿಗೋಸ್ಕರ ಈ ರೀತಿ ಹೇಳಿಕೆ ನೀಡುತ್ತಾರೆ : ಪೇಜಾವರ ಶ್ರೀ

ಸುಮಾರು 250 ವರ್ಷಗಳ ಹಿಂದೆ ಮೇಲುಕೋಟೆಯಲ್ಲಿ ಅಯ್ಯಂಗಾರರ ಮಾರಣಹೋಮವನ್ನು ಟಿಪ್ಪು ನಡೆಸಿದ್ದ ಎಂದು ಹೇಳಲಾಗುತ್ತದೆ. ಟಿಪ್ಪು ಆಡಳಿತದ ವಿರುದ್ಧ ಮೈಸೂರು ಸಂಸ್ಥಾನದ ಅಯ್ಯಂಗಾರ್ ಬ್ರಿಟಿಷರಿಗೆ ದೂರು ನೀಡಿದ್ದರು. ಈ ವಿಷಯ ತಿಳಿದು ಮೇಲುಕೋಟೆ ಮೇಲೆ ಟಿಪ್ಪು ಸುಲ್ತಾನ್ ದಾಳಿ ಮಾಡಿ, 800 ಮಂಡ್ಯದ ಅಯ್ಯಂಗಾರರನ್ನು ಹತ್ಯೆ ಮಾಡಿದ್ದ ಎನ್ನಲಾಗಿದೆ.

Last Updated : Oct 25, 2022, 2:00 PM IST

ABOUT THE AUTHOR

...view details