ಮಂಡ್ಯ: ಪತಿಯ ಅನಾರೋಗ್ಯದಿಂದ ಬೇಸತ್ತು ಗೃಹಿಣಿ ಇಬ್ಬರು ಮಕ್ಕಳೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಜಯಪುರ ಬಳಿಯ ವಿಸಿ ನಾಲೆಯಲ್ಲಿ ನಡೆದಿದೆ.
ಪತಿಗೆ ಕಿಡ್ನಿ ಸಮಸ್ಯೆ: ವೆಚ್ಚ ಬರಿಸಲಾಗದೇ ಮಕ್ಕಳೊಂದಿಗೆ ನಾಲೆಗೆ ಹಾರಿದ ತಾಯಿ - ಪತಿಯ ಚಿಕಿತ್ಸಾ ವೆಚ್ಚ ಬರಿಸಲಾಗದೆ ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ಪತಿಯ ಅನಾರೋಗ್ಯದಿಂದ ಬೇಸತ್ತು ಗೃಹಿಣಿ ಇಬ್ಬರು ಮಕ್ಕಳೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯದ ಜಯಪುರ ಬಳಿಯ ವಿಸಿ ನಾಲೆಯಲ್ಲಿ ನಡೆದಿದೆ.

ಪತಿಗೆ ಕಿಡ್ನಿ ವಿಫಲ......ಚಿಕಿತ್ಸಾ ವೆಚ್ಚ ಬರಿಸಲಾಗದೆ ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ಹುಲ್ಲೇನಹಳ್ಳಿ ಗ್ರಾಮದ ಜ್ಯೋತಿ (34) ಇಬ್ಬರು ಮಕ್ಕಳಾದ ನಿಸರ್ಗ(8) ಹಾಗೂ ಪವನ್(5) ಜೊತೆ ವಿಸಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜ್ಯೋತಿ ಅವರ ಪತಿಗೆ ಎರಡು ಕಿಡ್ನಿಗಳು ವಿಫಲಗೊಂಡಿದ್ದು, ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದೇ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಜ್ಯೋತಿ ಅವರ ಶವ ಸಿಕ್ಕಿದ್ದು, ಮಕ್ಕಳ ಶವಕ್ಕಾಗಿ ಶೋಧನಾ ಕಾರ್ಯ ನಡೆಯುತ್ತಿದೆ.
ಶಿವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಮಕ್ಕಳಿಬ್ಬರ ಶವಕ್ಕಾಗಿ ಶೋಧ ನಡೆಸುತ್ತಿದ್ದಾರೆ.