ಮಂಡ್ಯ:ಕೊರೊನಾ ಸೋಂಕು ಹರಡುತ್ತದೆ ಮನೆಯಿಂದ ಹೊರ ಹೋಗಬೇಡ. ಮೊಬೈಲ್ ಬಳಸಬೇಡ, ಬೈಕ್ ಮುಟ್ಟಬೇಡ ಎಂದು ಬುದ್ದಿವಾದ ಹೇಳಿದ ಹೆತ್ತ ತಾಯಿಯನ್ನೇ ಮಗ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಕೆ.ಆರ್.ರಸ್ತೆಯಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸಿರುವ ಪಶ್ಚಿಮ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿದ್ದಾರೆ.
ಕೊರೊನಾ ಇದೆ ಹೊರ ಹೋಗಬೇಡ ಎಂದಿದ್ದಷ್ಟೇ ಬಂತು: ಹೆತ್ತ ತಾಯಿಯನ್ನೇ ಕೊಂದ ಪುತ್ರ - Mandya Crime news
ಕೊರೊನಾ ಸೋಂಕು ಹರಡುತ್ತದೆ ಮನೆಯಿಂದ ಹೊರ ಹೋಗಬೇಡ. ಮೊಬೈಲ್ ಬಳಸಬೇಡ ಎಂದು ಹೇಳಿದ ಹೆತ್ತ ತಾಯಿಯನ್ನೇ ಮಗ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮಂಡ್ಯದ ನಗರದ ಕೆ.ಆರ್.ರಸ್ತೆಯಲ್ಲಿ ನಡೆದಿದೆ.
ತಾಯಿ ಕೊಂದ ಪಾಪಿ ಪುತ್ರ
ಶ್ರೀಲಕ್ಷ್ಮಿ (48) ಹತ್ಯೆಗೊಳಗಾದ ತಾಯಿ. ಪುತ್ರ ಮನು ಶರ್ಮಾ ಕೊಲೆ ಮಾಡಿದ ಆರೋಪಿ. ಈತ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಕೊರೊನಾ ಸಮಯದಲ್ಲಿ ಬೈಕ್ ತೆಗೆದುಕೊಂಡು ಸುತ್ತಾಡಬೇಡ. ಮೊಬೈಲ್ ಅನ್ನು ಅತಿಯಾಗಿ ಬಳಕೆ ಮಾಡಬೇಡ. ಇದರಿಂದ ನಿನಗೆ ತೊಂದರೆ ಆಗಲಿದೆ ಎಂದು ಮಗನಿಗೆ ಬುದ್ದಿವಾದ ಹೇಳಿದ್ದೇ ತಾಯಿ ಕೊಲೆಗೆ ಕಾರಣ ಎನ್ನಲಾಗಿದೆ.
ಈ ಸಂಬಂಧ ದೂರು ಸ್ವೀಕರಿಸಿರುವ ಪಶ್ಚಿಮ ಠಾಣೆ ಪೊಲೀಸರು, ಆರೋಪಿ ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.