ಮಂಡ್ಯ:ತಾಯಿಯೊಬ್ಬಳು ಇಬ್ಬರು ಕಂದಮ್ಮಗಳನ್ನು ಸಾಯಿಸಿದ ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾಂಡವಪುರ ತಾಲೂಕಿನ ಕುಪ್ಪಳ್ಳಿಯಲ್ಲಿ ನಡೆದಿದೆ.
ಮಂಡ್ಯದಲ್ಲಿ ಮಕ್ಕಳ ಸಾಯಿಸಿ, ನೇಣಿಗೆ ಶರಣಾದ ತಾಯಿ - ಮಂಡ್ಯದಲ್ಲಿ ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ
ಇಲ್ಲಿನ ಕುಪ್ಪಳ್ಳಿ ಗ್ರಾಮದಲ್ಲಿ ತಾಯಿಯೊಬ್ಬಳು ತನ್ನಿಬ್ಬರು ಪುಟ್ಟ ಮಕ್ಕಳನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮಂಡ್ಯದಲ್ಲಿ ತಾಯಿ ಮಕ್ಕಳು ಸಾವು
ಆತ್ಮಹತ್ಯೆಗೆ ಶರಣಾದ ತಾಯಿ ನಿವೇದಿತಾ (28) ಮಕ್ಕಳಾದ ಗಾನವಿ (6), ಉಲ್ಲಾಸ್ (4) ನನ್ನು ಕೊಂದಿದ್ದಾಳೆ.
ನಿವೇದಿತಾ ಪಾಂಡವಪುರ ತಾಲೂಕಿನ ಕುಪ್ಪಳ್ಳಿ ಗ್ರಾಮದ ನಿವಾಸಿ. ಈಕೆ ಮಾನಸಿಕ ಖಿನ್ನತೆಗೊಳಗಾಗಿ ತನ್ನ ಮಕ್ಕಳನ್ನು ಸಾಯಿಸಿ ತಾನು ಸಹ ನೇಣಿಗೆ ಶರಣಾಗಿದ್ದಾಳೆ ಎಂಬ ಮಾಹಿತಿ ದೊರೆತಿದೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Dec 1, 2020, 11:36 AM IST