ಮಂಡ್ಯ: ಅಗ್ನಿಪಥ ಯೋಜನೆ ವಿರೋಧಿಸಿ ಉತ್ತರ ಭಾರತದಲ್ಲಿ ಭುಗಿಲೆದ್ದ ಹಿಂಸಾಚಾರದ ಎಫೆಕ್ಟ್ ಸಾವಿರಾರು ಪ್ರಯಾಣಿಕರಿಗೆ ತಟ್ಟಿದೆ. ತಾತ್ಕಾಲಿಕವಾಗಿ ರೈಲು ಸಂಚಾರ ಸ್ಥಗಿತಗೊಂಡ ಹಿನ್ನೆಲೆ ಮಂಡ್ಯದ 70 ಕ್ಕೂ ಹೆಚ್ಚು ಪ್ರವಾಸಿಗರು ಕಾಶಿಯಲ್ಲಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಭಾರತದಲ್ಲಿ ಹಿಂಸಾಚಾರ: ಕಾಶಿಯಲ್ಲಿ ಪರದಾಡುತ್ತಿರುವ ಮಂಡ್ಯದ 70 ಕ್ಕೂ ಹೆಚ್ಚು ಪ್ರವಾಸಿಗರು
ಮಂಡ್ಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ 70 ಕ್ಕೂ ಅಧಿಕ ಕನ್ನಡಿಗರು ಉತ್ತರ ಭಾರತದ ಕಾಶಿ ಪ್ರವಾಸಕ್ಕೆ ತೆರಳಿದ್ದರು. ಇದೀಗ ಪ್ರತಿಭಟನೆಯಿಂದಾಗಿ ಕಾಶಿಯಿಂದ ಬೆಂಗಳೂರಿಗೆ ಬರುವ ರೈಲು ರದ್ದಾದ ಹಿನ್ನೆಲೆ ಮಂಡ್ಯ ತಲುಪುವುದು ಕಷ್ಟವಾಗಿದೆ. ಹಾಗಾಗಿ, ವಿಡಿಯೋ ಮಾಡಿ ಸಹಾಯ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ.
ಕಾಶಿಯಲ್ಲಿ ಪರದಾಡುತ್ತಿರುವ ಪ್ರವಾಸಿಗರು
ಮಂಡ್ಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ 70 ಕ್ಕೂ ಅಧಿಕ ಕನ್ನಡಿಗರು ಉತ್ತರ ಭಾರತದ ಕಾಶಿ ಪ್ರವಾಸಕ್ಕೆ ತೆರಳಿದ್ದರು. ಇದೀಗ ಪ್ರತಿಭಟನೆಯಿಂದಾಗಿ ಕಾಶಿಯಿಂದ ಬೆಂಗಳೂರಿಗೆ ಬರುವ ರೈಲು ರದ್ದಾದ ಹಿನ್ನೆಲೆ ಮಂಡ್ಯ ತಲುಪುವುದು ಕಷ್ಟವಾಗಿದೆ. ಹೀಗಾಗಿ, ಪ್ರವಾಸಕ್ಕೆ ಹೋಗಿದ್ದ ಗುತ್ತಲು ನಿವಾಸಿ ಮಧು ಶಿವ ಲಿಂಗಯ್ಯ ಹಾಗೂ ಸಹ ಪ್ರವಾಸಿಗರು ವಿಡಿಯೋ ಮಾಡಿ ತಮಗೆ ಸಹಾಯ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಅಗ್ನಿಪಥ್ಗೆ ಆಕ್ರೋಶ: 60 ಕಿ.ಮೀ ಓಡಿ ಅಸಮಾಧಾನ ಹೊರಹಾಕಿದ ಸೇನಾ ಉದ್ಯೋಗದ ಆಕಾಂಕ್ಷಿ!