ಮಂಡ್ಯ: ಕ್ಯಾಂಟೀನ್‌ನಲ್ಲಿ ಊಟ ಮಾಡಿದ 20ಕ್ಕೂ ಹೆಚ್ಚು ಮಹಿಳಾ ನೌಕರರು ಅಸ್ವಸ್ಥಗೊಂಡ ಘಟನೆ ಮದ್ದೂರು ತಾಲೂಕಿನ ಸೋಮನಹಳ್ಳಿಯ ಸರವಿ ಕಾರ್ಖಾನೆಯಲ್ಲಿ ನಡೆದಿದೆ.
ಮದ್ದೂರಲ್ಲಿ ಕಾರ್ಖಾನೆಯ ಕ್ಯಾಂಟೀನ್ ಊಟ ತಿಂದು 20ಕ್ಕೂ ಹೆಚ್ಚು ಮಹಿಳಾ ನೌಕರರು ಅಸ್ವಸ್ಥ - ಸೋಮನಹಳ್ಳಿಯ ಸರವಿ ಇಂಡಸ್ಟ್ರೀಯಲ್ ಘಟನೆ
ಕ್ಯಾಂಟೀನ್‌ನಲ್ಲಿ ಊಟ ಮಾಡಿದ 20ಕ್ಕೂ ಹೆಚ್ಚು ಮಹಿಳಾ ನೌಕರರು ಅಸ್ವಸ್ಥಗೊಂಡ ಘಟನೆ ಮದ್ದೂರು ತಾಲೂಕಿನ ಸೋಮನಹಳ್ಳಿಯ ಸರವಿ ಕಾರ್ಖಾನೆಯಲ್ಲಿ ನಡೆದಿದೆ.
20 ಕ್ಕೂ ಹೆಚ್ಚು ಮಹಿಳಾ ನೌಕರರು ಅಸ್ವಸ್ಥ
ಇಂದು ಮಧ್ಯಾಹ್ನ ಕ್ಯಾಂಟೀನ್‌ನಲ್ಲಿ ಊಟ ಮಾಡಿದ ಮಹಿಳಾ ನೌಕರರು, ಸ್ವಲ್ಪ ಹೊತ್ತಿನಲ್ಲೇ ತಲೆ ಸುತ್ತು, ವಾಂತಿ-ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಮದ್ದೂರಿನ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಲಾಯಿತು.
ಫುಡ್ ಪಾಯಿಸನ್ನಿಂದ ನೌಕರರು ಅಸ್ವಸ್ಥರಾಗಿರೋ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಕ್ಯಾಂಟೀನ್ ಪರಿಶೀಲನೆ ನಡೆಸಿದ್ದಾರೆ.