ಮಂಡ್ಯ: ಅಪಘಾತದಲ್ಲಿ ಮೃತಪಟ್ಟ ಮಂಗನಿಗೆ ಅಂತ್ಯಸಂಸ್ಕಾರ ಮಾಡಿ ಶ್ರೀರಂಗಪಟ್ಟಣದಲ್ಲಿ ಯುವಕನೊಬ್ಬ ಮಾನವೀಯತೆ ಮೆರೆದಿದ್ದಾನೆ.
ಅಪಘಾತದಲ್ಲಿ ಮೃತಪಟ್ಟ ಕೋತಿ:ಅಂತ್ಯಕ್ರಿಯೆ ನೆರವೇರಿಸಿ ಯುವಕನ ಮಾನವೀಯತೆ - Srirangapatna Mysore - Bangalore Highway
ಕಾವೇರಿ ನದಿ ದಂಡೆಯಲ್ಲಿ ಸಂಪ್ರದಾಯದಂತೆ ಕೋತಿಯ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಹೆದ್ದಾರಿಯಲ್ಲಿ ಜಾಗೂರುಕತೆಯಿಂದ ವಾಹನ ಚಲಾಯಿಸಿ ಪ್ರಾಣಿಗಳಿಗೂ ಜೀವವಿದೆ ಎಂದು ಮಾನವೀಯತೆ ಮೆರೆದ ಯುವಕ ರಮೇಶ್ ಕಂಬನಿ..

ಅಪಘಾತದಲ್ಲಿ ಮೃತಪಟ್ಟ ಕೋತಿಯ ಅಂತ್ಯಕ್ರಿಯೆ
ಶ್ರೀರಂಗಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ರಮೇಶ್ ಮಂಗನಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಹೆದ್ದಾರಿಯಲ್ಲಿ ಮಂಗನಿಗೆ ಡಿಕ್ಕಿ ಹೊಡೆದ ಕಾರು ಚಾಲಕ ಪರಾರಿಯಾಗಿದ್ದ. ಗಾಯಗೊಂಡ ಕೋತಿಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದರು ಮೃತಪಟ್ಟಿದೆ.
ಹೀಗಾಗಿ, ಕಾವೇರಿ ನದಿ ದಂಡೆಯಲ್ಲಿ ಸಂಪ್ರದಾಯದಂತೆ ಕೋತಿಯ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಹೆದ್ದಾರಿಯಲ್ಲಿ ಜಾಗೂರುಕತೆಯಿಂದ ವಾಹನ ಚಲಾಯಿಸಿ ಪ್ರಾಣಿಗಳಿಗೂ ಜೀವವಿದೆ ಎಂದು ಮಾನವೀಯತೆ ಮೆರೆದ ಯುವಕ ರಮೇಶ್ ಕಂಬನಿ ಮಿಡಿದಿದ್ದಾರೆ.