ಮಂಡ್ಯ :ಮನ್‌ಮುಲ್ ನೀರು ಮಿಶ್ರಿತ ಹಾಲು ಪೂರೈಕೆ ಹಗರಣಕ್ಕೆ ಸಂಬಂಧಿಸಿದಂತೆ ಆಡಿಯೋ ಬಹಿರಂಗ ವಿಚಾರಕ್ಕೆ ಮಾಜಿ ಸಚಿವ ಚೆಲುವರಾಯಸ್ವಾಮಿ ಊಟ ಹಾಕಿದ ತಾಯಿಯನ್ನೇ ಕಾಮಿಸಿದವರು ಎಂದು ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ಮಂಡಳಿ ಸೂಪರ್ ಸೀಡ್ ಮಾಡಿಸಿ, ಹಿಡಿತ ಸಾಧಿಸಲು ಯತ್ನ ಮಾಡಿದ್ದಾರೆ. ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ ಎಂದು ಮಾಜಿ ಸಚಿವರ ಮೇಲೆ ಕಿಡಿಕಾರಿದರು.
ಜೆಡಿಎಸ್ ಸರ್ಕಾರ ಹೋದ ಮೇಲೆ ಜಿಲ್ಲೆಯಲ್ಲಿ ಕಾಂಗ್ರೆಸ್‌ನವರದ್ದೇ ನಡೆಯುತ್ತಿರೋದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಯಡಿಯೂರಪ್ಪ ಅವರ ಜೊತೆ ಅಂಡರ್ ಸ್ಟ್ಯಾಂಡ್‌ನಲ್ಲಿದ್ದಾರೆ ಎಂದರಲ್ಲದೇ ಅನ್ನ ಹಾಕೋ ತಾಯಿಯನ್ನೇ ಕಾಮಿಸಿದವರು ಎಂಬ ಗಾದೆ ಮಾತಿದೆ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ನಲ್ಲಿ ಎಲ್ಲವನ್ನ ಅನುಭವಿಸಿ ಅವರ ಬಗ್ಗೆ ಮಾತನಾಡ್ತಿರಿ. ದೇವೇಗೌಡರನ್ನ, ಸಮಾಜವನ್ನ ತೇಜೋವಧೆ ಮಾಡಲು ತೆರೆ ಮರೆಯಲ್ಲೇ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗುಡುಗಿದರಲ್ಲದೇ ಸಿದ್ದರಾಮಯ್ಯ ಅವರು ಇಂಥವರನ್ನ ಯಾಕಾಗಿ ಜೊತೆಯಲ್ಲಿಟ್ಟುಕೊಂಡಿದ್ದಾರೋ ಎಂದು ಪ್ರಶ್ನೆ ಮಾಡಿದರು.