ಕರ್ನಾಟಕ

karnataka

ETV Bharat / state

ಸುಮಲತಾ ಅಕ್ಕ ಬನ್ನಿ.. ಅಕ್ರಮ ಗಣಿಗಾರಿಕೆ ನಿಲ್ಲಿಸಿ.. ಸಂಸದೆಗೆ ಸುರೇಶ್​ಗೌಡ ಆಹ್ವಾನ - ಸಂಸದೆ ಸುಮಲತಾ

ಹೆಚ್​ಡಿಕೆ ಹಾಗೂ ಸುಮಲತಾ ನಡುವಿನ ವಾಗ್ಯುದ್ಧ ಮುಗಿದರೂ, ನಾಗಮಂಗಲ ಶಾಸಕ ಸುರೇಶ್ ಗೌಡರು ಮಾತ್ರ ಸುಮ್ಮನಾಗಿಲ್ಲ. ಸಂಸದೆ ನೀಡಿದ್ದ ಹೇಳಿಕೆಗಳ ಕುರಿತು ವ್ಯಂಗ್ಯವಾಡುತ್ತಲೇ ಇದ್ದಾರೆ..

ಸುರೇಶ್​ಗೌಡ
ಸುರೇಶ್​ಗೌಡ

By

Published : Jul 12, 2021, 12:36 PM IST

ಮಂಡ್ಯ :ಅಕ್ರಮ ಗಣಿಗಾರಿಕೆ ವಿರುದ್ಧ ಸಂಸದೆ ಸುಮಲತಾ ಧ್ವನಿ ಎತ್ತಿದ್ದ ಹಿನ್ನೆಲೆ ನಾಗಮಂಗಲ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸುವಂತೆ ಸಂಸದೆ ಸುಮಲತಾ ಅವರಿಗೆ ಶಾಸಕ ಸುರೇಶ್ ಗೌಡ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಲತಾ ಅಕ್ಕ ದಯಮಾಡಿ ಬಂದು ನನ್ನ ಕ್ಷೇತ್ರದಲ್ಲಿನ ಅಕ್ರಮ ಗಣಿಗಾರಿಕೆ ನಿಲ್ಲಿಸಿ. ನಾಗಮಂಗಲ ಕ್ಷೇತ್ರದಲ್ಲಿ ನಡಿತಿಯುತ್ತಿರುವುದೆಲ್ಲ ಅಕ್ರಮ ಗಣಿಗಾರಿಕೆಯೇ. ನೀವು ಅಲ್ಲಿಂದಲೇ ಅಕ್ರಮ ಗಣಿಗಾರಿಕೆ ನಿಲ್ಲಿಸುವುದನ್ನು ಶುರು ಮಾಡಿ, ನಾನೂ ನಿಮ್ಮೊಂದಿಗೆ ಬರುತ್ತೇನೆ ಎಂದು ಪರೋಕ್ಷವಾಗಿ ಸಂಸದೆ ವಿರುದ್ಧ ವ್ಯಂಗ್ಯವಾಡಿದರು.

ಸುಮಲತಾ ಅಕ್ಕ ಬನ್ನಿ. ಅಕ್ರಮ ಗಣಿಗಾರಿಕೆ ನಿಲ್ಲಿಸಿ: ಸಂಸದೆಗೆ ಸುರೇಶ್​ಗೌಡ ಆಹ್ವಾನ

‘ನನಗೂ ಧ್ವನಿ ಎತ್ತಿ ಸಾಕಾಗಿದೆ’

ನಾಗಮಂಗಲ ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಗಣಿಗಾರಿಕೆ ನಿಲ್ಲಿಸಿ-ಮಂಡ್ಯ ಜಿಲ್ಲೆ ಉಳಿಸಿ. ನನಗೂ ಅಕ್ರಮ ಗಣಿಗಾರಿಕೆ ಬಗ್ಗೆ ಧ್ವನಿ ಎತ್ತಿ ಸಾಕಾಗಿದೆ. ಸ್ಥಳೀಯರೆಲ್ಲ ಧ್ವನಿಯೆತ್ತಲು ಸಾಧ್ಯವಾಗಲ್ಲ. ನೀವು ಸಂಸದರು ಬನ್ನಿ. ನಾನು ನಿಮ್ಮ ಜತೆ ಬಂದು, ಅಕ್ರಮ ಗಣಿಗಾರಿಕೆ ನಿಲ್ಲಿಸಲು ಬೆಂಬಲ ನೀಡುತ್ತೇನೆ ಎಂದರು.

‘ಮೊದಲು ನಾಗಮಂಗಲದಿಂದ ಶುರುವಾಗಲಿ’

ನಿಮ್ಮ ಕೆಲಸ ಮೊದಲು ನಾಗಮಂಗಲದಿಂದ ಶುರುವಾಗಲಿ. ನಾನು ನಿಮ್ಮ ಜೊತೆ ಬರುತ್ತೇನೆ. ನಾಗಮಂಗಲದಲ್ಲಿ ನಡೆಯುತ್ತಿರುವ ಗಣಿಗಾರಿಕೆಗಳಲ್ಲಿ ಒಂದೆರಡು ಬಿಟ್ಟರೆ, ಉಳಿದೆಲ್ಲಾ ಅಕ್ರಮ. ಅವುಗಳನ್ನು ತಡೆಯುವ ನಿಟ್ಟಿನಲ್ಲಿ ನೀವು ಮುಂದಡಿಯಿಡಿ. ನಿಮಗೆ ಯಾವುದೇ ತೊಂದರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

‘ಅಕ್ರಮ ಸಕ್ರಮ ಮಾಡಿಕೊಡ್ತೀವಿ ಅಂದ್ರು ಸಿಎಂ’

ಯಡಿಯೂರಪ್ಪನವರು ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆಯನ್ನು ಸಕ್ರಮ ಮಾಡಿಕೊಡುತ್ತೇವೆ ಎಂದಿದ್ದಾರೆ. ಈಗ ಸುಮಲತಾ ಅಕ್ಕ ಎದ್ದಿದ್ದಾರೆ. ಅವರ ಹೋರಾಟಕ್ಕೆ ಜಯವಾಗಲಿ ಎಂದು ಶುಭ ಹಾರೈಸಿದರು.

ಸಂಸದರಿಗೆ ಪತ್ರ ಬರೆದು ಆಹ್ವಾನ

ನಾಗಮಂಗಲ ಕ್ಷೇತ್ರಕ್ಕೆ ಸುಮಲತಾ ಅಕ್ಕ ಅವರಿಗೆ ಪತ್ರ ಬರೆದು ಆಹ್ವಾನ ಕೊಡುತ್ತೇನೆ. ಎಲ್ಲೆಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ನಾನೇ ಕರೆದುಕೊಂಡು ಹೋಗಿ ತೋರಿಸ್ತೇನೆ ಎಂದು ತಮ್ಮ ಕ್ಷೇತ್ರದಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಸಂಸದೆಗೆ ಶಾಸಕ ಸುರೇಶ್ ಗೌಡ ಆಹ್ವಾನ ಕೊಟ್ಟರು.

ಸರ್ಕಾರ ಸುಮಲತಾ ಮೇಲೆ ಕ್ರಮವಹಿಸಬೇಕು

ಸರ್ಕಾರ ಇಷ್ಟೊತ್ತಿಗೆ ಸಂಸದರ ಮೇಲೆ ಕ್ರಮವಹಿಸಬೇಕಿತ್ತು. ಆದ್ರೆ, ಯಾಕೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಯಡಿಯೂರಪ್ಪ ಸರ್ಕಾರದ ವಿರುದ್ಧ ಶಾಸಕ ಸುರೇಶ್ ಗೌಡ ಕಿಡಿಕಾರಿದರು.

ತಮ್ಮ ತಪ್ಪನ್ನು ಮುಚ್ಚಿಕೊಳ್ಳುವುದಕ್ಕೆ ಜನರ ಗಮನವನ್ನ ಬೇರೆಡೆ ಸೆಳೆಯುವ ಕಲೆ ಕಲಿತಿದ್ದಾರೆ. ಮಾಡಿದ ತಪ್ಪಿಗೆ ಜನರು ಉಗಿಯುತ್ತಿದ್ದಾರೆ. ಅದನ್ನ ಡೈವರ್ಟ್ ಮಾಡಲು ಏನಾದ್ರೂ ಸೃಷ್ಟಿ ಮಾಡ್ತಾರೆ. ಇಲ್ಲಿ ಪ್ರೊಡ್ಯೂಸರ್, ಡೈರೆಕ್ಟರ್, ಸ್ಕ್ರಿಪ್ಟ್ ರೈಟರ್ ಬೇರೆಯವರೇ ಇದ್ದಾರೆ. ಆ್ಯಕ್ಟರ್ಸ್ ಮಾತ್ರ ಸಿಕ್ಕಾಪಟ್ಟೆ ಮಂದಿ ಇದ್ದಾರೆ ಎಂದು ಸುಮಲತಾ ವಿರುದ್ಧ ಸುರೇಶ್ ಗೌಡ ಕುಹುಕವಾಡಿದರು.

ಡ್ಯಾಂ ಬಿರುಕು ಬಿಡೋದು ತಮಾಷೆ ಮಾತೇ?

ಮನೆ ಕಟ್ಟಿ 20 ವರ್ಷವಾದ ಮೇಲೆ ರಿಪೇರಿ ಮಾಡುತ್ತೇವೆ. ಡ್ಯಾಂಗೆ ಕೂಡ ಸಣ್ಣಪುಟ್ಟ ಕೆಲಸ ಮಾಡುತ್ತಿರುತ್ತಾರೆ. KRS ಡ್ಯಾಂ ಬಿರುಕು ಬಿಡೋದು ತಮಾಷೆ ಮಾತಾ? ಅಣೆಕಟ್ಟು ಬಿರುಕು ಬಿಟ್ಟರೆ ಹಿಡಿಯೋಕ್ಕಾಗುತ್ತಾ ಎಂದು ಪ್ರಶ್ನಿಸಿದ್ರು.

ಡ್ಯಾಂ ಬಗ್ಗೆ ನೀರಾವರಿ ಇಲಾಖೆ ಸ್ಪಷ್ಟನೆ

ಡ್ಯಾಂ ಬಿರುಕು ಬಿಟ್ಟಿಲ್ಲ ಅಂತಾ ನೀರಾವರಿ ಇಲಾಖೆ ಈಗಾಗಲೇ ಸ್ಪಷ್ಟನೆ ನೀಡಿದೆ. ಇವರು ಮಾತ್ರ ಬಿರುಕು ಬಿಟ್ಟಿದೆ ಅಂತಾರೆ. ಸುಮಲತಾ ಅವರು ಈ ಬಗ್ಗೆ ಕನಸು ಕಾಣುತ್ತಿರಬೇಕು ಎಂದು ಲೇವಡಿ ಮಾಡಿದರು. ಸರ್ಕಾರ ಇಷ್ಟೊತ್ತಿಗೆ ಸಂಸದರ ಮೇಲೆ ಕ್ರಮವಹಿಸಬೇಕಿತ್ತು. ಒಬ್ಬ ಜನ ಸಾಮಾನ್ಯ KRS ಡ್ಯಾಂ ಕಟ್ಟೆ ಒಡೆದಿದೆ ಅಂದಿದ್ರೆ ಸುಮ್ಮನಿರ್ತಿದ್ರಾ ನೀವು?. ಮೊದಲು ಜೈಲಿಗೆ ಅಟ್ಟುತ್ತಿದ್ರಿ. ಇವರ ಮೇಲ್ಯಾಕೆ ಕ್ರಮಕೈಗೊಳ್ತಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿದ್ರು.

ABOUT THE AUTHOR

...view details