ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಅವರು ಮಂಡ್ಯ ಜಿಲ್ಲೆಗೆ ಉಪಯೋಗವಾಗುವ ಯಾವುದೇ ಕೆಲಸವನ್ನೂ ಮಾಡ್ತಿಲ್ಲ. ಬೇಡವಾಡ ಕೆಲಸ ಮಾಡ್ಕೊಂಡು ನಿಂತಿದ್ದಾರೆ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಡವಾಡ ವಿಚಾರ ಎತ್ತಿಕೊಂಡು ಕೆಆರ್ಎಸ್ ಉಳಿಸ್ತಿನಿ ಅಂತ ಹೋಗಿದ್ದಾರೆ. ಉಳಿಸೋಕೆ ಹಾಳಾಗಿರೋದು ಏನು?. ಡ್ಯಾಂಗೆ ಏನೂ ಆಗಿಲ್ಲ. ಸುಮ್ಮನೆ ಬೇರೆ ಬೇರೆ ವಿಚಾರ ತೆಗೆದುಕೊಂಡು ಅನಾವಶ್ಯಕವಾಗಿ ಸಾರ್ವಜನಿಕರಿಗೆ ಗೊಂದಲ ಉಂಟು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕರ ಬದುಕಿನಲ್ಲಿ ಹಾಹಾಕಾರ ಸೃಷ್ಟಿ ಮಾಡಿದ್ದಾರೆ. ಈ ರೀತಿ ಮಾಡಿ ಇವರು ಸಾಧಿಸುವುದು ಏನು ಇಲ್ಲ. ಇದರಿಂದ ಜನರು ಆಕ್ರೋಶಗೊಳ್ತಾರೆ. ಮಾಡಬೇಕಾಗಿರುವ ಕೆಲಸವನ್ನು ಸಂಸದರು ಮಾಡಲಿ ಎಂದು ಸಲಹೆ ನೀಡಿದರು.