ಮಂಡ್ಯ:ಸರಿಯಾದ ಮಾಹಿತಿ ಪಡೆಯದೆ ಡ್ಯಾಂ ಬಿರುಕು ಬಿಟ್ಟಿದೆ ಎಂದಿದ್ದಾರೆ. ಇದು ದೇಶದ್ರೋಹದಷ್ಟೇ ಅಪರಾಧ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂಬ ಸಂಸದೆ ಸುಮಲತಾ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರನ್ನು ಪ್ರಚೋದಿಸುವ ಕೆಲಸ ಸುಮಲತಾ ಮಾಡುತ್ತಿದ್ದಾರೆ. ಯಾರಾದರೂ ಇದರ ಬಗ್ಗೆ ಕಾನೂನು ಹೋರಾಟ ಮಾಡಿದರೆ ಸುಮಲತಾ ಶಿಕ್ಷೆ ಅನುಭವಿಸಬೇಕಾಗಬಹುದು ಎಂದರು.
ಚುನಾವಣೆಯಲ್ಲಿ ಗೆದ್ದ ಬಳಿಕ ಮಂಡ್ಯ ಅಭಿವೃದ್ಧಿಗಾಗಿ ಏನು ಮಾಡಿದ್ದಾರೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಲಿ. ಕೋವಿಡ್ ಸಂಕಷ್ಟದಲ್ಲಿ ಜನರ ಕಷ್ಟ ಕೇಳಲಿಲ್ಲ. ನಾನು ಕ್ಷೇತ್ರಕ್ಕೆ ಬಂದರೆ ಜನ ಸೇರುತ್ತಾರೆ ಎಂಬ ಕಾರಣ ಕೊಟ್ಟು ದೂರ ಉಳಿದಿದ್ದು ನಾಚಿಕೆಗೇಡು ಎಂದು ಕಿಡಿಕಾರಿದರು.