ಮಂಡ್ಯ:ಕೆಆರ್‌ಎಸ್ ವಾಕ್ಸಮರದ ಬಳಿಕ ಈಗ ಮಂಡ್ಯದಲ್ಲಿ ದಳಪತಿಗಳು v/s ಸುಮಲತಾ ಅಂಬರೀಶ್ ನಡುವೆ ಯುದ್ಧ ಶುರುವಾಗಿದೆ. ಸುಮಲತಾ ಅಂಬರೀಶ್ ಹಾಗೂ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಭಟ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡುವಂತೆ ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದರು.
ಸುಮಲತಾ ಲೆಟರೆಡ್ನಲ್ಲಿ ಸಹಿ ಹಾಗೂ ಜಿಲ್ಲೆಯ ಉನ್ನತ ಅಧಿಕಾರಿಗಳಿಗೆ ಹಣಕ್ಕಾಗಿ ಪೀಡಿಸಿದ್ದಾರೆ ಅಂತ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದ್ರು. ಸುಮಲತಾ ಅಟೆಂಡರ್ ಚೇತಕ್ ಒಬ್ಬ ಫ್ರಾಡ್, ನಯ ವಂಚಕ ಎಂದು ಗುಡುಗಿದರು. ಈತ ಮೆಡಿಕಲ್ ಸೀಟ್ ಕೊಡಿಸುವುದಾಗಿ ಜನರಿಗೆ ಪಂಗನಾಮ ಹಾಕಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.